ಬೆಂಗಳೂರು: ಕರ್ನಾಟಕದಲ್ಲೂ ತಾಲೀಬಾನಿ ರೀತಿ ಕ್ರೌರ್ಯ..? ರಾಜಧಾನಿ ಬೆಂಗಳೂರಿನಲ್ಲೂ ತಾನಿಬಾನಿ ಪ್ರೇರಿತರು ಇದ್ದಾರೆಯೇ? ಇಂಥದ್ದೊಂದು ಬೀತಿ ಹುಟ್ಟಿಸುವ ನೈತಿಕ ಪೊಲೀಸ್ ಗಿರಿಯ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾದ ಘಟನೆಯ ವೀಡಿಯೋವೊಂದು ಸಾನಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಗಳಾಗಿರುವ ಯುವತಿ ಯುವಕ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಪುಂಡರ ಗುಂಪು ದೌರ್ಜನ್ಯ ನಡೆಸಿದೆ. ಯುವತಿ ಮತ್ತು ಯುವಕ ದ್ವಿಚಕ್ರ ವಾಹನದಲ್ಲಿ ಹೂಗುತ್ತಿದ್ದುದನ್ನು ಗಮನಿಸಿದ ಮುಸ್ಲಿಂ ಯುವಕರ ಸೋಗಿನಲ್ಲಿದ್ದ ಗುಂಪು ತಡೆದು ಬೆದರಿಸಿದೆ. ಬೈಕ್‌ನಲ್ಲಿದ್ದ ಯುವತಿ ಬುರ್ಕಾ ಧರಿಸಿದ್ದರು. ಆಕೆಯನ್ನು ಟಾರ್ಗೆಟ್ ಮಾಡಿ ನಡು ರಸ್ತೆಯಲ್ಲೇ ನಿಂದಿಸಿದ ಪುಂಡರು, ಬುರ್ಕಾ ಧರಿಸಿಕೊಂಡು ಅನ್ಯ ಧರ್ಮೀಯನೊಂದಿಗೆ ಹೋಗ್ತಾ ಇದ್ದೀಯ ಎಂದು ಧಮ್ಕಿ ಹಾಕಿದ್ದಾರೆ. ಯುವತಿಯ ಮನೆಯವರ ಫೋನ್ ನಂಬರ್ ಪಡೆದು, ಕರೆಮಾಡಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.