ಬೆಂಗಳೂರು: ಹಾಲಿನ ದರ ಕಡಿತ ನಿರ್ಧಾರ ಕೈ ಬಿಡಬೇಕು. ರೈತರ ಜೊತೆ ಹುಡುಗಾಟಿಕ್ಕೆ ಆಡಬಾರದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಹಾಲಿನ ದರ ಕಡಿಮೆ ಮಾಡುವುದು ಒಕ್ಕೂಟಗಳ ಸರ್ವನಾಶಕ್ಕೆ ಕಾರಣವಾಗುತ್ತದೆ. ಈಗಾಗಲೇ ನಂದಿನಿ ಹಾಲಿಗೆ ಸ್ಪರ್ಧಾತ್ಮಕವಾಗಿರುವ ಖಾಸಗಿ ಡೈರಿಗಳು ಲೀಟರ್ ಹಾಲಿಗೆ 45 ರಿಂದ 50 ರೂ ನೀಡುತ್ತಿವೆ. ಹೈನುಗಾರಿಕೆಯ ರೈತರು ಅತ್ತ ಮುಖ ಮಾಡುತ್ತಿದ್ದಾರೆ ಎಂದ ಕುರುಬೂರು ಶಾಂತಕುಮಾರ್, ಅಮುಲ್ ಹಾಲಿನ ಜೊತೆ ಸೆಣಸಾಡಿ ಮಾರಾಟ ರೂಪಿಸಬೇಕಾಗಿದೆ ಎಂದರು.
ಸಾಮಾಜಿಕ ಜಾಲತಾಣದ ಮೂಲಕ ಎಲ್ಲವೂ ತಿಳಿಯುತ್ತಿದೆ. ಇನ್ನು ಮೋಸ ಮಾಡುವುದು ಸಾಧ್ಯವಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ನಿರ್ಧಾರ ಕೈಗೊಳ್ಳಲಿ. ಎಂದು ಕುರುಬೂರು ಶಾಂತಕುಮಾರ್ ಹೇಳಿದರು.