ಮಂಡ್ಯ: ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ವಿಧಿವಶರಾಗಿದ್ದಾರೆ. ಕಾವೇರಿ ಹೋರಾಟದ ಮೂಲಕ ರೈತನಾಯಕನಾಗಿ ದಕ್ಷಿಣ ಭಾರತದಲ್ಲಿ ಗಮನಸೆಳೆಯುತ್ತಿದ್ದ ಮಾದೇಗೌಡರು, ಕೆಲ ಸಮಯದಿಂದ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶನಿವಾರ ಅವರು ಕೊನೆಯುಸಿರೆಳೆದಿದ್ದಾರೆ.

94 ವರ್ಷ ವಯಸ್ಸಿನ ಜಿ.ಮಾದೇಗೌಡರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 2 ಬಾರಿ ಸಂಸದರಾಗಿದ್ದರು. ಗುಂಡೂರಾವ್ ಸರ್ಕಾರದಲ್ಲಿ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿದ್ದರು.
ಮಾದೇಗೌಡರ ನಿಧನಕ್ಕೆ ಸಿಎಂ ಸೇರಿದಂತೆ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.






















































