ದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆಗಳ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ದೆಹಲಿ ವರಿಷ್ಠರು ಕೂಡಾ ಬಿಎಸ್‌ವೈ ಅವರಿಗೆ ಬುಲಾವ್ ನೀಡಿ ದೆಹಲಿಗೆ ಕರೆಸಿಕೊಂಡಿದ್ದಾರೆಂದು ಅತೃಪ್ತರ ಬಣ ಹೇಳಿಕೊಳ್ಳುತ್ತಿವೆ. ಆದರೆ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಧಾನಿ ಹಾಗೂ ಕೇಂದ್ರ ಸಚಿವರೊಂದಿಗೆ ಚರ್ಚಿಸಲು ತಾವು ದೆಹಲಿಗೆ ತೆರಳಿರುವುದಾಗಿ ಸಿಎಂ ಹೇಳಿಕೊಂಡಿದ್ದಾರೆ.
ಈ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ರಾಜ್ಯದ ಜನರಲ್ಲಿ ಕುತೂಹಲ ಕೆರಳುವಂತಾಗಿದೆ. ಅದೇ ಹೊತ್ತಿಗೆ ಸಿಎಂ ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ಸಾಧ್ಯತೆಗಳ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಬಿತ್ತರಿಸಿವೆ.
ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಸಿರುವ ಬಿ.ಎಸ್.ಯಡಿಯೂರಪ್ಪ, ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಯಡಿಯೂರಪ್ಪ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಷ್ತ್ರೀಯ ಮಾಧ್ಯಮಗಳಲ್ಲಿ ತಾವು ರಾಜೀನಾಮೆ ನೀಡುವ ಸಾಧ್ಯತೆಗಳ ಬಗ್ಗೆ ಪ್ರತಿಕ್ರಿಸಿಯಿದರು. ಅದು ಸತ್ಯಕ್ಕೆ ದೂರವಾದ ಸಂಗತಿ. ತಾವು ರಾಜೀನಾಮೆ ನೀಡುವ ಪ್ರಶ್ಬೆಯೇ ಇಲ್ಲ ಎಂದರು.
#WATCH "Not at all…," says Karnataka CM BS Yediyurappa on being asked if he has resigned pic.twitter.com/mQDSI7g8Pu
— ANI (@ANI) July 17, 2021
ಈ ಮಧ್ಯೆ, ಸಿಎಂ ಯಡಿಯೂರಪ್ಪ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ರಾಜನಾಥ್ ಸಿಂಗ್ ಜೊತೆಗೂ ಸಮಾಲೋಚನೆ ನಡೆದಿದೆ.
ಆದರೆ, ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಬೆಳಿಗ್ಗೆಯೇ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಯಡಿಯೂರಪ್ಪ ಅವರು ತರಾತುರಿಯಲ್ಲೇ ಬೆಂಗಳೂರಿಗೆ ವಾಪಾಸ್ಸಾಗಲು ಏರ್ಪೋರ್ಟ್‌ನತ್ತ ತೆರಳಿದರು. ಆದರೆ ಅದೇ ಹೊತ್ತಿಗೆ, ದಿಢೀರ್ ಸಂದೇಶವೊಂದು ಯಡಿಯೂರಪ್ಪ ಅವರಿಗೆ ತಲುಪಿದ್ದು, ಅಮಿತ್ ಶಾ ಆಪ್ತರಿಂದ ಬುಲಾವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿಗಾಗಿ ವಿಮಾನ ನಿಲ್ದಾಣ ಕಡೆಯಿಂದ ಷಾ ನಿವಾಸತ್ತ ಮರಳಿದರು. ದೆಹಲಿಯ ಕೃಷ್ಣಾ ಮೆನನ್ ಮಾರ್ಗದಲ್ಲಿರುವ ಅಮಿತ್ ಶಾ ನಿವಾಸದಲ್ಲಿ ಸುದೀರ್ಘ ಹೊತ್ತು ನಡೆದ ಈ ನಾಯಕರ ಮಾತುಕತೆ ತೀವ್ರ ಕುತೂಹಲ ಕೆರಳುವಂತಾಯಿತು.
ಅಮಿತ್ ಶಾ ಭೇಟಿ ನಂತರ ಮಾಹಿತಿ ಹಂಚಿಕೊಂಡ ಬಿಎಸ್‌ವೈ, ರಾಜ್ಯದ ಅಭಿವೃದ್ಧಿ ಕುರಿತಂತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು. ಶಾ ಅವರು ನಮ್ಮೊಂದಿಗೆ ಸಂತಸದಿಂದಲೇ ಮಾತನಾಡಿದರು. ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸುವ ಸಂಬಂಧ ಸಲಹೆ ನೀಡಿದರು ಎಂದು ಬಿಎಸ್‌ವೈ ತಿಳಿಸಿದರು.