ಬೆಂಗಳೂರು: ಕರಾವಳಿ ಜಿಲ್ಲೆಯ ಜನರ ಧ್ವನಿಯಾಗಿ ಕುಂದಾಪುರ ಶಾಸಕ ಕಿರಣ್ ಕೋಡ್ಗಿ ಅವರು ಧ್ವನಿ ಎತ್ತಿದ ನಡೆ ಗಮನಸೆಳೆದಿದೆ.
ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ 5 ಪಶುವೈದ್ಯರು ಹಾಗೂ 25 ಪಶುಪರಿವೀಕ್ಷಕರು ಸಹಿತ 40 ಹುದ್ದೆಗಳು ಖಾಲಿ ಇವೆ ಎಂದು ವಿಧಾನಸಭೆಯಲ್ಲಿ ಸೋಮವಾರ ಪ್ರಸ್ತಾಪಿಸಿದರು. ಕಳೆದ 3 ವಿಧಾನಸಭಾ ಅಧಿವೇಶನಗಳಲ್ಲೂ ಸಚಿವರಿಗೆ ಈ ಬಗ್ಗೆ ಮನವಿ ಮಾಡಿದ್ದರೂ ಈ ವರೆಗೆ ಖಾಲಿ ಹುದ್ದೆಗೆ ಅಧಿಕಾರಿಗಳ ನಿಯುಕ್ತಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ವಿಳಂಬ ಕುರಿತು ಕುಂದಾಪುರ ಶಾಸಕರಾದ ಶ್ರೀ @KiranKodgiBjp ಅವರು ಸಚಿವರಿಗೆ ಕೇಳಿದ ಪ್ರಶ್ನೆಗೆ ಸದನದಲ್ಲಿ ಧ್ವನಿಗೂಡಿಸಲಾಯಿತು. pic.twitter.com/bKlrgXtKP0
— Gururaj Gantihole (@gantihole) July 15, 2024
ಇದಕ್ಕೆ ಉತ್ತರಿಸಿದ ಸಚಿವರು, ತುಂಬಾ ಹುದ್ದೆಗಳು ಖಾಲಿ ಇವೆ, ಹಂತ ಹಂತವಾಗಿ ಭರ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಪ್ರತೀ ಬಾರಿ ನೇಮಕಾತಿ ಆಗುತ್ತದೆಯಾದರೂ ಕರಾವಳಿಗೆ ನಿಯುಕ್ತಿ ಮಾಡುತ್ತಿಲ್ಲ. ಹಾಗಾಗಿ ಈ ಬಗ್ಗೆ ಮುಂಚಿತವಾಗಿಯೇ ನೆನಪಿಸುತ್ತಿದೇವೆ. ನೇಮಕ ಮಾಡುತ್ತೀರಿ ಎಂಬ ನಂಬಿಕೆ ಇದೆ ಎಂದು ಸದನದ ಗಮನಸೆಳೆದರು.