ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ದಕ್ಷಿಣ ಭಾರತದ ಪುಣ್ಯಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮ ಗಮನಸೆಳೆಯಿತು.
ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಜಗದೋದ್ದಾರಕ ಶ್ರೀ ಕೃಷ್ಣನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಸಾವಿರಾರು ಭಕ್ತರು ಈ ಕೈಂಕರ್ಯಕ್ಕೆ ಸಾಕ್ಷಿಯಾದರು.
ತುಳುನಾಡು ತುಂಬೆಲ್ಲಾ ವಿಟ್ಲಪಿಂಡಿ ಉತ್ಸವ ನಡೆದಿದ್ದರೆ, ಶ್ರೀ ಕ್ಷೇತ್ರ ಕಟೀಲಿನಲ್ಲೂ ಶ್ರೀಕೃಷ್ಣನ ಆರಾಧನೆ ಗಮನಸೆಳೆಯಿತು. ಉತ್ಸವದ ಅಂತ್ಯದಲ್ಲಿ ವಿಗ್ರಹ ವಿಸರ್ಜನೆಯ ವಿಧಿವಿಧಾನಗಳೂ ಭಕ್ತ ಸಮೂಹದ ಕಣ್ಮನ ಸೆಳೆಯಿತು. ದೇಗುಲದ ಪ್ರಮುಖರು, ಅರ್ಚಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





















































