ಬೆಂಗಳೂರು: ಬಿರುಬಿಸಿಲ ಧಗೆಯಲ್ಲಿ ಬೆಂದಿರುವ ಮಂದಿಗೆ ಇಲ್ಲಿದೆ ಸಿಹಿಸುದ್ದಿ. ಮುಂದಿನ 2 ದಿನಗಳಲ್ಲಿ ಹಲವೆಡೆ ಬೇಸಿಗೆ ಮಳೆಯಾಗುವ ಸಾಧ್ಯತೆಗಳಿವೆ.
ಬೆಂಗಳೂರು ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಳೇ ಮೈಸೂರು ಭಾಗದ ಹಲವೆಡೆ ಗುರುವಾರವೇ ಮಳೆಯಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಕೆಲವಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ, ಉತ್ತರ-ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಗಳಿವೆ.
ರಾಜ್ಯದಾದ್ಯಂತ ಮುಂದಿನ 2 ವಾರಗಳ ಸಂಚಿತ ಮಳೆಯ ಮುನ್ಸೂಚನೆ ನಕ್ಷೆಗಳು:
Cummmulative Rainfall Forecast Maps for the next 2 weeks over the State: pic.twitter.com/70niJ5FWK3— Karnataka State Natural Disaster Monitoring Centre (@KarnatakaSNDMC) March 30, 2023