ಇಂದೋರ್: ಮಧ್ಯಪ್ರದೇಶದ ಇಂಧೋರ್ ಬಳಿ ರಾಮನವಮಿ ಆಚರಣೆ ವೇಳೆ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 35ಕ್ಕೇರಿದೆ. ದುರ್ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಪಾಲಾಗಿರುವ ಅನೇಕರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
Tragedy struck Beleshwar Mahadev Jhulelal temple in #Indore as 35 bodies were recovered from a broken well during #RamNavami ritual due to heavy footfall. Violence also erupted in 4 states during the procession, including stone pelting in #Vadodara, vehicle fires in #Howrah. pic.twitter.com/9yrbg9VwKk
— Janvi Sonaiya (@JanviSonaiya) March 31, 2023
ಇಂದೋರ್ ನ ಶ್ರೀಬೇಲೆಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನ ಬಳಿ ಗುರುವಾರ ಈ ದುರ್ಘಟನೆ ನಡೆದಿದೆ. ರಾಮನವಮಿ ಸಂದರ್ಭದ ಪೂಜಾ ಕೈಂಕರ್ಯ ವೇಳೆ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಈ ವೇಳೆ ಮಂದಿರದ ಒಂದು ಭಾಗದಲ್ಲಿ ಬಾವಿಗೆ ಹಾಸಲಾಗಿದ್ದ ಛಾವಣಿ ಏಕಾಏಕಿ ಕುಸಿದು ಬಿದ್ದಿದೆ ಎನ್ಬಲಾಗಿದೆ. ಆವೇಳೆ ಅಬೇಕರು ಬಾವಿಯೊಳಗೆ ಬಿದ್ದರೆನ್ನಲಾಗಿದೆ.
ಕೂಡಲೇ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಅನೇಕರನ್ನು ರಕ್ಷಿಸಿದ್ದಾರೆ.