ಹಾವೇರಿ: ಜನಮನ ಗೆದ್ದ ಸಿಎಂ ಬೊಮ್ಮಾಯಿ ಮಾಮ. ಅವರಿಗೆ ಕೆಲಸ ಮಾಡಲು ಇನ್ನಷ್ಟು ಸಮಯ ಬೇಕಿದೆ. ಜನರಿಗೆ ಒಳಿತಿಗಾಗಿ ಅವರನ್ನು ಬೆಂಬಲಿಸಿ ಎಂದು ಚಿತ್ರನಟ ಕಿಚ್ಚ ಸುದೀಪ್ ವಿನಂತಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಯವರು ಬುಧವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಟ ಸುದೀಪ್, ಬೊಮ್ಮಾಯಿ ಮಾಮ ಕಾಮ್‍ಕೆವಾಸ್ತೆ ಸಿಎಂ ಹೇಗಿದ್ದೀರ ಎಂದೇ ಕಿಚ್ಚ ಸುದೀಪ್ ಮಾತು ಆರಂಭಿಸಿದರು. ಸುಂದರವಾಗಿ ಸುಸ್ವಾಗತ ನೀಡಿ ಪ್ರೀತಿ ತೋರಿದ್ದೀರಿ ಎಂದರಲ್ಲದೆ, ಬೊಮ್ಮಾಯಿ ಮಾಮ ಅವರು ಕಡಿಮೆ ಅವಧಿಯಲ್ಲಿ ತುಂಬ ಕೆಲಸ ಮಾಡಿದ ವ್ಯಕ್ತಿ ಎಂದು ತಿಳಿಸಿದರು. ನಾಮ್‍ಕೆವಾಸ್ತೆ ಅಲ್ಲ ಕಾಮ್‍ಕೆವಾಸ್ತೆ ಸಿಎಂ ಅವರು ಎಂದು ನುಡಿದರು.
ನಾನು ಒಬ್ಬ ಭಾರತೀಯನಾಗಿ ಪ್ರಧಾನಿ ಮೋದಿ ಅವರ ಕೆಲಸಗಳನ್ನು ಮೆಚ್ಚುತ್ತೇನೆ. ನಿಮ್ಮ ನಂಬಿಕೆ ಇದ್ದರೆ ಕೆಲಸ ಚೆನ್ನಾಗಿ ಆಗುತ್ತದೆ ಎಂದು ತಿಳಿಸಿದರು. ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಹಾಡನ್ನು ಅವರು ಉದಾಹರಿಸಿದರು.
ವಿದೇಶದಲ್ಲಿಂದು ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆಂದರೆ ಅದಕ್ಕೆ ಕಾರಣ ಪ್ರಧಾನಿ ಶ್ರೀ @narendramodi ಅವರ ದೂರದೃಷ್ಟಿಯಿಂದ ಭಾರತ ಜಾಗತಿಕ ಮನ್ನಣೆ ಗಳಿಸಿದೆ. ನಿಮ್ಮ ವಿಶ್ವಾಸ, ಬೆಂಬಲದಿಂದ ಬೊಮ್ಮಾಯಿ ಅವರನ್ನು ಗೆಲ್ಲಿಸಿಯೇ ಹೋಗುತ್ತೇನೆ.
– ಶ್ರೀ @KicchaSudeep #BJPYeBharavase pic.twitter.com/E9kYLF936h
— BJP Karnataka (@BJP4Karnataka) April 19, 2023
ಇದಕ್ಕೂ ಮೊದಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು ಶಿಗ್ಗಾವಿಯಲ್ಲಿ ಸಿಎಂ ಬಸರಾಜ ಬೊಮ್ಮಾಯಿಯೊಂದಿಗೆ ಬೃಹತ್ ರೋಡ್ ಷೋ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಚಿವರಾದ ಬಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಚಿತ್ರ ನಟ ಸುದೀಪ್, ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲರು ಉಪಸ್ಥಿತರಿದ್ದರು.