ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ವಿಧಿವಶರಾಗಿದ್ದಾರೆ.
65 ವರ್ಷ ವಯಸ್ಸಿನ ಮಹದೇವ ಪ್ರಕಾಶ್ ಸಿಎಂ ಯಡಿಯೂರಪ್ಪ ಅವರಿಗೆ ಈ ಹಿಂದೆ ಮಾಧ್ಯಮ ಸಲಹೆಗಾರರಾಗಿದ್ದರು. ರಾಜಕೀಯ ವಿಶ್ಲೇಷಕರೂ ಆಗಿದ್ದ ಅವರು ಕೆಲವು ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ಬಲಾಗಿದೆ.
ಮಹಾದೇವ್ ಪ್ರಕಾಶ್ ಅವರ ನಿಧನಕ್ಕೆ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.
ಒಬ್ಬ ಪ್ರಬುದ್ಧ ಚಿಂತಕ ಪತ್ರಕರ್ತ ಸಮಾಜ ಜೀವಿ ಗೆಳೆಯರನ್ನ ಕಳೆದುಕೊಂಡಿದ್ದೇವೆ
ರಾಜ್ಯಕ್ಕೆ ಸಮಾಜಕ್ಕೆ ವೈಚಾರಿಕ ಲೋಕಕ್ಕೆ ಅವರ ಕುಟುಂಬಕ್ಕೆ ದೊಡ್ಡ ಆಘಾತ
ಅವರ ಆತ್ಮಕ್ಕೆ ಶಾಂತಿ ದೊರೆಯಲಿ pic.twitter.com/y7sD7Ujd0j
— Ramesh Babu (@rameshbabuexmlc) May 14, 2021