ಟೋಕಿಯೊ: ಹೊಸ ವರ್ಷಾರಂಭದಲ್ಲೇ ಜಪಾನ್ ಕರಾವಳಿ ತೀರದ ಪ್ರದೇಶಗಳಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಒಂದೇ ದಿನ 15೦ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದ್ದು ಕೆಲವೆಡೆ ಸಂಭವಿಸಿದ ಅನಾಹುತಗಳಲ್ಲಿ13 ಮಂದಿ ಸಾವಿಗೀಡಾಗಿದ್ದಾರೆ. ವಾಜಿಮಾ ಬಂದರಿನಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ
ಜಪಾನಿನ ಇಶಿಕಾವಾ ಪ್ರಾಂತ್ಯದಲ್ಲಿ ಭೂಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯನ್ನು ದಾಖಲಿಸಿತ್ತು. ಭೂಕಂಪದ ತೀವ್ರತೆಗೆ ಹಲವೆಡೆ ಕಟ್ಟಡಗಳು ನೆಲಕ್ಕುರುಳಿವೆ. ಸರಣಿ ಅನಾಹುತಗಳು ಹಲವು ಜೀವಗಳನ್ನು ಬಲಿತೆಗೆದುಕೊಂಡಿವೆ.
ವಿನಾಶಕಾರಿ ಭೂಕಂಪದಿಂದಾಗಿ ಭಾರಿ ಸಾವುನೋವು ಸಂಭವಿಸಿದೆ ಎಂದು ಆಘಾತ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ, ಕಟ್ಟಡ ಕುಸಿತ, ಬೆಂಕಿ ಅನಾಹುತಗಳಲ್ಲಿ ಭಾರೀ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.






















































