ರಾಯಚೂರು: ರಾಜ್ಯದಲ್ಲಿ ಈಗ ಚಿನ್ನ ಉತ್ಪಾದಿಸುವ ಏಕೈಕ ಗಣಿ ಇರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯು ಕೊರೊನಾ ಎರಡನೆಯ ಅಲೆಯ ಹಿನ್ನಲೆ ಈ ವರ್ಷವೂ ಬಂದ್ ಮಾಡಲಾಗಿದೆ.
ರಾಜ್ಯ ಸರಕಾರವು 14 ದಿನ ಲಾಕ್ ಡೌನ್ ಘೋಷಣೆ ಮಾಡಿದ ಬೆನ್ನಲ್ಲಿಯೇ ಹಟ್ಟಿ ಚಿನ್ನದ ಗಣಿಯನ್ನು ಸಹ ಬಂದ್ ಮಾಡಲಾಗಿದೆ, ಮೇ 24 ರವರೆಗೂ ಗಣಿ ಚುಟುವಟಿಕೆ ಬಂದ್ ಮಾಡಿ ಹಟ್ಟಿ ಚಿನ್ನದ ಗಣಿ ಕಂಪನಿಯೂ ಆದೇಶ ಹೊರಡಿಸಿದೆ.
ಸಿಬ್ಬಂದಿ ಮನೆಯಲ್ಲಿ ಇರುವಂತೆ ಹಟ್ಟಿ ಕಂಪನಿ ಆಡಳಿತ ಮಂಡಳಿ ಆದೇಶ ಹೊರಡಿಸಿದ್ದು, ಹಟ್ಟಿ ಚಿನ್ನದ ಗಣಿ ಆಸ್ಪತ್ರೆ, ಸೇರಿದಂತೆ ಅವಶ್ಯಕ ವಿಭಾಗ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದೆ, ಸಿಬ್ಬಂದಿ ಹಟ್ಟಿ ಕೇಂದ್ರ ಸ್ಥಾನ ಬಿಡುವಾಗ ಅನುಮತಿ ಪಡೆದು ಹೋಗಲು ಆದೇಶದಲ್ಲಿ ಸೂಚನೆ ನೀಡಲಾಗಿದೆ, ಸರ್ಕಾರದ ಮಾರ್ಗಸೂಚಿಯಂತೆ ಚಿನ್ನದ ಗಣಿ ಬಂದ್ ಮಾಡಿ ಆದೇಶ ಮಾಡಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಾಣಿ, ರಾಯಚೂರು ಜಿಲ್ಲೆ ಹಟ್ಟಿ ಚಿನ್ನದ ಗಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿಧ೯ರಿಸಲಾಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಿರುವ ಕಾರಣ ಕೆಲ ದಿನಗಳ ಮಟ್ಟಿಗೆ ಕಾಯಾ೯ಚಟುವಟಿಕೆ ಸ್ಥಗಿತಮಾಡಲಾಗಿದೆ.ನಮಗೆ ಲಾಭ ನಷ್ಟಕ್ಕಿಂತ ಕಾರ್ಮಿಕರ ಹಿತ ಮುಖ್ಯ ಎಂದಿದ್ದಾರೆ.