ಹುಬ್ಬಳ್ಳಿ: ಮೂರು ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಹತ್ತಾರು ರೀತಿ ಲೆಕ್ಕಾಚಾರಗಳಿಗೆ ಹಾದಿ ಮಾಡಿಕೊಡಲಿದೆ. ಹಾಗಾಗಿ ಫಲಿತಾಂಶ ತೀವ್ರ ಕುತೂಹಲ ಕೆರಳುವಂತಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಬಿಜೆಪಿ ಮೇಲುಗೈ ಸಾಧಿಸುತ್ತಿದೆ. ಈ ಮೂಲಕ ಹ್ಯಾಟ್ರಿಕ್ ವಿಜಯದ ಹಾದಿಯಲ್ಲಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ವರ್ಚಸ್ಸಿನ ಪ್ರಶ್ನೆಯಾಗಿದೆ. ಹಾಗಾಗಿ ಈ ನಾಯಕರು ಶಕ್ತಿ ಮೀರಿ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಇತ್ತೀಚಿನ ವರದಿ ಪ್ರಕಾರ ಒಟ್ಟು 82 ಸ್ಥಾನಗಳ ಪೈಕಿ 3,9 ರಲ್ಲಿ ಬಿಜೆಪಿ, 33ರಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಜೆಡಿಎಸ್ ಒಂದುವಕಡೆ ಗೆದ್ದರೆ, 9 ವಾರ್ಡ್‌ಗಳು ಪಕ್ಷೇತರರ ಪಾಲಾಗಿವೆ.