ಬೆಂಗಳೂರು: ಶಿಕ್ಷಣ, ವಸತಿ ಸಹಿತ ವಿವಿಧ ದಾಸೋಹ ರೀತ್ಯಾ ಸೇವೆಯ ಮೂಲಕ ನಾಡಿನ ಗಮನಸೆಳೆದಿರುವ ಕರ್ನಾಟಕ ರೆಡ್ಡಿ ಜನ ಸಂಘ ಈ ಬಾರಿ ಮತ್ತೆ ಮತ್ತೆ ಕುತೂಹಲದ ಕೇಂದ್ರಬಿಂದುವಾಗಿದೆ. ಕಳೆದ 99 ವರ್ಷಗಳ ಇತಿಹಾಸದಲ್ಲಿ ಸಂಘದಲ್ಲಿ ಚುನಾವಣೆ ನಡೆಯದೆ ಆಡಳಿತ ಮಂಡಳಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗುತ್ತಾ ಬಂದಿರುವುದು ಚರಿತ್ರಾರ್ಹ ದಾಖಲೆ. 2023-26ರ ಸಾಲಿನ ಆಡಳಿತ ಮಂಡಳಿ ಆಯ್ಕೆಗೆ ಕಳೆದ ಡಿಸೆಂಬರ್ನಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿ ಈ ಬಾರಿಯೂ ಸಂಘದ 35 ಆಡಳಿತ ಮಂಡಳಿ ಸದಸ್ಯರೂ 8 ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾದರು.
ಶತಮಾನೋತ್ಸವ ಸಂಭ್ರಮ..!
ಕರ್ನಾಟಕ ರೆಡ್ಡಿಜನ ಸಂಘ ಬಡಮದ್ಯಮ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಸೌಲಭ್ಯ ಕಲ್ಪಿಸುವ ಮಹದೋದ್ದೇಶದಿಂದ 1925ರಲ್ಲಿ ಸ್ಥಾಪನೆಯಾಗಿ ಇನ್ನು ಕೆಲವೇ ತಿಂಗಳಲ್ಲಿ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಕರ್ನಾಟಕ ರೆಡ್ಡಿಜನ ಸಂಘವು ಸಮುದಾಯದ ಮಹನೀಯರ ಕೊಡುಗೆಯಿಂದ ಅಂದು 100 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘ ಇಂದು ಕೋರಮಂಗಲ, ಮಾರತ್ ಹಳ್ಳಿ, ರೂಪೇನ ಅಗ್ರಹಾರ, ದೊಡ್ಡನೆಕ್ಕುಂದಿಗಳಲ್ಲಿ ನರ್ಸರಿಯಿಂದ ಇಂಜಿನಿಯರಿಂಗ್’ವರೆಗೆ 11 ವಿದ್ಯಾಸಂಸ್ಥೆಗಳನ್ನು ನಡೆಸುವಷ್ಟು ಹೆಮ್ಮರವಾಗಿ ಬೆಳೆದಿದೆ. ಪ್ರಸ್ತುತ 6500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 500ಕ್ಕೂ ಹೆಚ್ಚು ಬೋಧಕ- ಬೋಧಕೇತರ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. Vemana Institute of Technology, Vemana Institute of Physiotherapy ಜೊತೆಗೆ, ಮರಸೂರಿನಲ್ಲಿ ಸುಸಜ್ಜಿತ ಆಸ್ಪತ್ರೆ ಮತ್ತು ಕಸವನಹಳ್ಳಿಯಲ್ಲಿ ವೈದ್ಯಕೀಯ ಕಾಲೆಜು ಶೀಘ್ರವಾಗಿ ಪ್ರಾರಂಭವಾಗಲಿದೆ.
ಈ 99 ವರ್ಷಗಳ ಇತಿಹಾಸದಲ್ಲಿ ಸಂಘದಲ್ಲಿ ಚುನಾವಣೆ ನಡೆಯದೆ ಅವಿರೋಧವಾಗಿ ಆಡಳಿತ ಮಂಡಳಿಯ ಸದಸ್ಯರು ಆಯ್ಕೆಯಾಗುತ್ತಾ ಬಂದಿರುವುದು ಚರಿತ್ರಾರ್ಹ ದಾಖಲೆ. 2023-26 ರ ಅವಧಿಗೂ ಆಢಳಿತ ಮಂಡಳಿ ಸದಸ್ಯರೂ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗುವಲ್ಲಿ ಸಲಹಾ ಸಮಿತಿಯ ಅಧ್ಯಕ್ಷರೂ ಆದ ಸಚಿವ ರಾಮಲಿಂಗಾರೆಡ್ಡಿಯವರ ಪಾತ್ರ ಅತ್ಯಂತ ಪ್ರಶಂಶನೀಯ. ಹಾಗೆಯೇ ಸಮಿತಿಯ ಸದಸ್ಯರುಗಳಾದ ರಾಜ್ಯಸಭಾಸದಸ್ಯರಾದ ಕುಪೇಂದ್ರರೆಡ್ಡಿ, ಕೆ ಸಿ ರಾಮಮೂರ್ತಿ, ಶಾಸಕರಾದ ಸತೀಶ್ ರೆಡ್ಡಿ ಹಾಗೂ ಎಸ್. ಆರ್. ವಿಶ್ವನಾಥ್ ರವರ ಸಹಕಾರ ಸ್ಮರಣೀಯ ಎನ್ನುತ್ತಿದ್ದಾರೆ ಸಮುದಾಯದ ಪ್ರಮುಖರು.
ಆಯ್ಕೆಯಾದ ಪದಾಧಿಕಾರಿಗಳು :
ಎಸ್.ಜಯರಾಮರೆಡ್ಡಿ -ಅಧ್ಯಕ್ಷರು
ಡಿ.ಎನ್.ಲಕ್ಷ್ಮಣರೆಡ್ಡಿ-ಉಪಾಧ್ಯಕ್ಷರು
ಕೆ.ಎನ್.ಕೃಷ್ಣಾರೆಡ್ಡಿ -ಉಪಾಧ್ಯಕ್ಷರು
ಎನ್.ಶೇಖರ್ ರೆಡ್ಡಿ- ಪ್ರಧಾನ ಕಾರ್ಯದರ್ಶಿಗಳು
ನಾಗರಾಜರೆಡ್ಡಿ ಕೆ.ಆರ್. -ಜಂಟಿಕಾರ್ಯದರ್ಶಿಗಳು
ಎನ್ ಸೋಮಶೇಖರ್ ರೆಡ್ಡಿ- ಜಂಟಿಕಾರ್ಯದರ್ಶಿಗಳು
ಎಂ.ಚಂದ್ರಾರೆಡ್ಡಿ- ಖಜಾಂಚಿ
ಕರ್ನಾಟಕ ರೆಡ್ಡಿ ಜನ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಆಢಳಿತ ಮಂಡಳಿ ಸದಸ್ಯರಿಗೆ ಪದಾಧಿಕಾರಿಗಳಿಗೆ ಸಲಹಾ ಸಮಿತಿವತಿಯಿಂದ ಅಧ್ಯಕ್ಷರಾದ ರಾಮಲಿಂಗಾರೆಡ್ಡಿಯವರು ಅಭಿನಂದಿಸಿದ್ದಾರೆ.