‘ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆಯ ಫಲಿತಾಂಶ ಬಿಹೆಪಿ ನಾಯಕರಿಗೆ ಪಾಠ ಎಂಬಂತಾಗಿದೆ. ಪ್ರಧಾನಿ ಮೋದಿಯವರ ತವರು ಜಿಲ್ಲೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆಯಾದರೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ತವರು ಹಿಮಾಚಲ ಪ್ರದೇಶದಲ್ಲಿ ಹೀನಾಯವಾಗಿ ಸೋಲುಂಡಿದೆ. ಆದರೂ ಬಿಜೆಪಿ ನಾಯಕರು, ಗುಜರಾತ್ ಫಲಿತಾಂಶವನ್ನು ಮುಂದಿಟ್ಟು ತಮ್ಮ ಪಕ್ಷ ದಿಗ್ವಿಜಯ ಸಾಧಿಸಿದೆ ಎಂಬಂತೆ ಬೀಗುತ್ತಿದೆ.
ಗುಜರಾತ್‌ನಲ್ಲಿ ಬಿಜೆಪಿ ಈ ಹಿಂದಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಆದರೆ ಅದಕ್ಕಿಂತಲೂ ಹಿಮಾಚಲದಲ್ಲಿ ಸೋಲುಂಡು ಒಂದು ರಾಜ್ಯದ ಅಧಿಕಾರವನ್ನೇ ಕಳೆದುಕೊಂಡಿದೆ. ಅಂದರೆ ಈ ಚುನಾವಣೆ ಬಿಜೆಪಿ ಪಾಲಿಗೆ ಸೋಲಿನ ಫಲಿತಾಂಶ ಎಂದರೆ ತಪ್ಪಾಗದು.
ಇದೇ ವೇಳೆ, ಬಿಜೆಪಿ ನಾಯಕರು ಚುನಾವಣಾ ದಿಕ್ಸೂಚಿಯನ್ನು ಗುಜರಾತಿನ ಫಲಿತಾಂಶದಿಂದಷ್ಟೇ ನೋಡುವ ಅಗತ್ಯವಿಲ್ಲ, ಹಿಮಾಚಲ ಪ್ರದೇಶದ ಫಲಿತಾಂಶದಿಂದಲೂ ನೋಡಲಿ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಬಿಜೆಪಿಯ ದುರಾಡಳಿತವನ್ನು ಹಿಮಾಚಲ ಪ್ರದೇಶದ ಜನತೆ ಹೇಗೆ ತಿರಸ್ಕರಿಸಿದ್ದಾರೋ ಹಾಗೆಯೇ ಕರ್ನಾಟಕದಲ್ಲೂ ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
'@BJP4Karnataka ನಾಯಕರು ಚುನಾವಣಾ ದಿಕ್ಸೂಚಿಯನ್ನು ಗುಜರಾತಿನ ಫಲಿತಾಂಶದಿಂದಷ್ಟೇ ನೋಡುವ ಅಗತ್ಯವಿಲ್ಲ, ಹಿಮಾಚಲ ಪ್ರದೇಶದ ಫಲಿತಾಂಶದಿಂದಲೂ ನೋಡಲಿ.
ಬಿಜೆಪಿಯ ದುರಾಡಳಿತವನ್ನು
ಹಿಮಾಚಲ ಪ್ರದೇಶದ ಜನತೆ ಹೇಗೆ ತಿರಸ್ಕರಿಸಿದ್ದಾರೋ ಹಾಗೆಯೇ ಕರ್ನಾಟಕದಲ್ಲೂ ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ.— Karnataka Congress (@INCKarnataka) December 8, 2022
ಜನರ ಸ್ಪಂದನೆಯೇ ಇಲ್ಲದ ಖಾಲಿ ಕುರ್ಚಿಗಳ ಸಮಾವೇಶಗಳನ್ನು ಮಾಡಿದ ಬಿಜೆಪಿ ಪಕ್ಷ ಮತ್ತೆ ಗೆಲ್ಲುತ್ತೇವೆ ಎನ್ನುವುದು ಪರಮಹಾಸ್ಯ. ಕುರ್ಚಿಗಳು ಮತ ಹಾಕುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರು ಮನಗಾಣಲಿ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿಯ ಮೆಗಾ ರೋಡ್ ಶೋ ಹಿಮಾಚಲ ಪ್ರದೇಶದಲ್ಲಿ ವಿಫಲವಾಗಿದ್ದೇಕೆ?ತವರಿಗೆ ಮಾತ್ರ ಮೋದಿಯವರ ಪ್ರಭಾವ ಸೀಮಿತವಾಗಿದೆಯಲ್ಲವೇ? ಎಂದು ಪ್ರಶ್ನಿಸಿದೆ.
ಜನರ ಸ್ಪಂದನೆಯೇ ಇಲ್ಲದ ಖಾಲಿ ಕುರ್ಚಿಗಳ ಸಮಾವೇಶಗಳನ್ನು ಮಾಡಿದ @BJP4Karnataka ಪಕ್ಷ ಮತ್ತೆ ಗೆಲ್ಲುತ್ತೇವೆ ಎನ್ನುವುದು ಪರಮಹಾಸ್ಯ.
ಕುರ್ಚಿಗಳು ಮತ ಹಾಕುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರು ಮನಗಾಣಲಿ!ಪ್ರಧಾನಿಯ ಮೆಗಾ ರೋಡ್ ಶೋ ಹಿಮಾಚಲ ಪ್ರದೇಶದಲ್ಲಿ ವಿಫಲವಾಗಿದ್ದೇಕೆ?
ತವರಿಗೆ ಮಾತ್ರ ಮೋದಿಯವರ ಪ್ರಭಾವ ಸೀಮಿತವಾಗಿದೆಯಲ್ಲವೇ?— Karnataka Congress (@INCKarnataka) December 8, 2022























































