ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಸರಸ್ವತಿ ನಗರದಲ್ಲಿ ಗೋವಿಂದರಾಜನಗರ ಪೊಲೀಸ್ ಠಾಣೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
ಕ್ಷೇತ್ರಕ್ಕೆ ಪ್ರತ್ಯೇಕ ಪೊಲೀಸ್ ಠಾಣೆಯ ಅಗತ್ಯ ಇರುವುದನ್ನು ಈ ಹಿಂದಿನ ಗೃಹಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಅವರಿಗೆ ಸಚಿವ ವಿ ಸೋಮಣ್ಣ ಮನವರಿಕೆ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಗೃಹ ಇಲಾಖೆ ನೂತನ ಪೊಲೀಸ್ ಠಾಣೆಯ ಆರಂಭಕ್ಕೆ ಅನುಮತಿ ನೀಡಿತ್ತು.
ಇದೀಗ ವಿಜಯ ನಗರ ಪೊಲೀಸ್ ಠಾಣೆಯನ್ನು ವಿಂಗಡಿಸಿ, ಕಾಮಾಕ್ಷಿಪಾಳ್ಯ, ಅನ್ನಪೂರ್ಣೇಶ್ವರಿನಗರ, ಚಂದ್ರಾಲೇಔಟ್ ಠಾಣೆಗಳ ಭಾಗಗಳನ್ನು ಸೇರಿಸಿ ಗೋವಿಂದ ರಾಜ ನಗರದ ಸರಸ್ವತಿ ನಗರದಲ್ಲಿ ಹೊಸ ಠಾಣೆ ಕಾರ್ಯಾಚರಿಸಲಿದೆ. ಶನಿವಾರ ಗೋವಿಂದರಾಜನಗರ ಕ್ಷೇತ್ರದ ನೂತನ ಪೊಲೀಸ್ ಠಾಣೆ ಉದ್ಘಾಟನೆ ಆಗಲಿದೆ.