ಬೆಂಗಳೂರು: ರಾಜ್ಯ ರಾಜಧಾನಿಯ ಬಿಟಿಎಂ ಲೇಔಟ್ ನಲ್ಲಿರುವ ದೇವರ ಚಿಕ್ಕನಹಳ್ಳಿಯಲ್ಲಿರುವ ಪಾರ್ಟ್ಮೆಂಟ್ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಸಜೀವ ದಹನವಾದ ಘಟನೆ ಮಂಗಳವಾರ ನಡೆದಿದೆ. ದುರಂತದಲ್ಲಿ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದು ತಾಯಿ ಲಕ್ಷ್ಮೀದೇವಿ (82 ವರ್ಷ), ಪುತ್ರಿ ಭಾಗ್ಯ ರೇಖಾ (59 ವರ್ಷ) ಅವರು ಸೋಮವಾರ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ್ದರು.
ಅಪಾರ್ಟ್ ಮೆಂಟ್ ನ 210 ನೇ ಫ್ಲ್ಯಾಟ್‌ನಲ್ಲಿ ತಾಯಿ ಹಾಗೂ ಮಗಳು ಇದ್ದರು. ಅಗ್ನಿ ಅವಘಡದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ತಾಯಿ ಹಾಗೂ ಪುತ್ರಿ ಮೃತದೇಹ ಪತ್ತೆಯಾಗಿದೆ.
ಈ ಅಗ್ನಿ ಅವಘಡದಲ್ಲಿ ಭೀಮಸೇನ್ ಎಂಬವರು ಗಾಯಗೊಂಡಿದ್ದಾರೆ.