ಆಗಾಗ್ಗೆ ಅಪಘಾತ ಸಂಭವಿಸುತ್ತಿರುವ ಸ್ಥಳ.. ಉಡುಪಿ ಜಿಲ್ಲೆ ಗಂಗೊಳ್ಳಿ ಸಮೀಪದ ಮುಳ್ಳಿಕಟ್ಟೆ ಸರ್ಕಲ್‌ನ ಈ ಪ್ರದೇಶವು ಸರಣಿ ಅಪಘಾತಗಳ ಹಾಟ್ ಸ್ಪಾಟ್ ಎಂದೇ ಗುರುತಾಗಿದೆ. ಅವೆಷ್ಟೋ ಅನಾಹುತಗಳು ನಡೆಯುತ್ತಿದ್ದು, ಅಂತಹಾ ದುರಂತಗಳು ಮರುಕಳಿಸಬಾರದೆಂಬ ಉದ್ದೇಶದಿಂದ ಸ್ಥಳೀಯ ಯುವಕರ ಸೈನ್ಯ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಆ್ಯಕ್ಸಿಡೆಂಟ್ ಸ್ಪಾಟ್‌ನಲ್ಲಿ ಸಾಲು-ಸಾಲು ಬ್ಯಾರಿಕೇಡ್‌ಗಳನ್ನು ಹಾಕಿಸಿ ಮಾನವೀಯತೆ ಮೆರೆದಿದ್ದಾರೆ. ಈ ಅಪರಾಧ ತಡೆ ಸಲಕರಣೆಗಳನ್ನು ಸ್ವಾತಂತ್ರ್ಯ ದಿನದ ಮುನ್ನಾದಿನದಂದು ಲೋಕೋರ್ಪಣೆ ಮಾಡಲಾಗಿದೆ.
ಸರಣಿ ಅಪಘಾತಗಳು ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥರಾದ ಗೋವಿಂದ ಪೂಜಾರಿಯವರ ಗಮನಕ್ಕೆ ತಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಒಂದಷ್ಟು ಹುಡುಗರು ಈ ಕೊಡುಗೆಗಳನ್ನು ನೀಡಿದ್ದಾರೆ.
ಅಪಘಾತ ತಾಣವಾಗಿರುವುದರಿಂದ ಇಲ್ಲಿ ಸ್ಥಳಿಯರ ಸಹಭಾಗಿತ್ವದಲ್ಲಿ ಬ್ಯಾರಿಕೇಡ್ ವ್ಯವಸ್ತೆ ಮಾಡಿ ಅಪಘಾತ ತಡೆಗಟ್ಟುವ ಪ್ರಯತ್ನ ನಡೆದಿದ್ದು, ಇದನ್ನು ಸಾಮಾಜಿಕ ಕಾರ್ಯಕರ್ತರೂ ಆದ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ಉಧ್ಘಾಟಿಸಿದರು. ಇವರೊಂದಿಗೆ ಪೋಲಿಸ್ ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರದ್ದರು.