ದುಬೈ: ಜಗತ್ತಿನಲ್ಲೇ ಅಪರೂಪ ಹಾಗೂ ಅತೀ ದೊಡ್ಡ ವಾಣಿಜ್ಯ ಪರ್ವಕ್ಕೆ ದುಬೈನಲ್ಲಿರುವ ಅನಿವಾಸಿ ಭಾರತೀಯರು ಮುನ್ನುಡಿ ಬರೆದಿದ್ದಾರೆ. ದುಬೈನಲ್ಲಿರುವ ಕನ್ನಡಿಗರ ಸಮೂಹವೇ ಈ ಸನ್ನಿವೇಶದ ಸೂತ್ರಧಾರರು ಎಂಬುದು ಕುತೂಹಲಕಾರಿ ಸಂಗತಿ.
ದುಡಿಮೆಗಾಗಿ ವಿದೇಶಕ್ಕೆ ತೆರಳಿರುವ ಬಹಳಷ್ಟು ಕ್ರಿಯಾಶೀಲರು ದುಬೈನಲ್ಲೂ ಮೇನಿಯಾ ಪ್ರದರ್ಶಿಸುತ್ತಿದ್ದಾರೆ. ಅದರಂತೆ ಅಪರೂಪದಲ್ಲಿ ಅಪರೂಪ ಎಂಬಂತಹ ಪ್ರಯತ್ನಕ್ಕೆ ಈ ಪ್ರಜ್ಞಾವಂತರ ತಂಡ ಇಳಿದಿದ್ದು, ಇವರು ಸಂಘಟಿಸುತ್ತಿರುವ ಅತೀ ದೊಡ್ಡ ‘ಪ್ರಾಪರ್ಟಿ ಶೋ’ ಜಾಗತಿಕ ಗಮನ ಕೇಂದ್ರೀಕರಿಸಿದೆ.
ದುಬೈನಲ್ಲಿ ಇದು ಭಾರತದ ಅತೀ ದೊಡ್ಡ ರಿಯಲ್ ಎಸ್ಟೇಟ್ ಪ್ರಾಪರ್ಟಿ ಶೋ ಎಂದೇ ಬಿಂಬಿತವಾಗಲಿದೆ. ಡಿಸೆಂಬರ್ 10 ಮತ್ತು 11ರಂದು ದುಬೈ ‘ವರ್ಲ್ಡ್ ಟ್ರೇಡ್ ಸೆಂಟರ್ ಝಬೀಲ್ ಹಾಲ್’ನಲ್ಲಿ ಈ ಶೋ ನೆರವೇರಲಿದೆ.
ದುಬೈನಲ್ಲಿರುವ ಸಾವಿರಾರು ಮಂದಿ ಭಾರತೀಯ ಸಂಜಾತರು ಅನೇಕಾನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮೊಳಗೆಯೇ ಸಂಘಟನಾತ್ಮಕ ಶಕ್ತಿಯನ್ನು ಕೇಂದ್ರೀಕರಿಸುವಂತೆ ಮಾಡಿದ್ದಾರೆ. ಇದೀಗ ಅದರ ಜೊತೆ ವಾಣಿಜ್ಯಾತ್ಮಕ ಶಕ್ತಿ ತುಂಬುವ ಸಂಬಂಧ ಈ ‘ರಿಯಲ್ ಎಸ್ಟೇಟ್ ಪ್ರಾಪರ್ಟಿ ಶೋ’ ಹಮ್ಮಿಕೊಂಡಿರುವುದು ಪ್ರಶಂಸಾರ್ಹ ನಡೆಯಾಗಿದೆ. ಡಿಸೆಂಬರ್ 10 ಮತ್ತು 11ರಂದು ದುಬೈ ‘ವರ್ಲ್ಡ್ ಟ್ರೇಡ್ ಸೆಂಟರ್ ಝಬೀಲ್ ಹಾಲ್’ನಲ್ಲಿ ಈ ಶೋ ನೆರವೇರಲಿದ್ದು ಕೈಗಾರಿಕೋದ್ಯಮಿಗಳು, ತಜ್ಞರರು, ರಾಜತಾಂತ್ರಿಕರ ಸಮಾಗಮಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ.
ಪ್ರಾಪರ್ಟಿ ಶೋ ಹೈಲೈಟ್ಸ್ ಹೀಗಿದೆ:
ಜಗತ್ತಿನ ವಿವಿಧ ದೇಶಗಳಲ್ಲಿ ಹಲವು ವರ್ಷಗಳಿಂದ ಇಂಡಿಯನ್ ಪ್ರಾಪರ್ಟಿ ಶೋ ನಡೆಸುತ್ತಿರುವ ಅನಿವಾಸಿ ಕನ್ನಡಿಗರೇ ಇದರ ಪ್ರೇರಣಾ ಶಕ್ತಿ.
ಈ ಕ್ಷೇತ್ರದ ದಿಗ್ಗಜರು, ಪರಿಣಿತರಾದ ಝಿಯಾ ಸೇಠ್, ಇನಾಯತ್ ಸೇಠ್ ಅವರನ್ನೊಳಗೊಂಡ ‘ಮ್ಯಾಕ್ಸ್ ಪೋ’ ತಂಡದ ಸಾರಥ್ಯದಲ್ಲಿ ಈ ಪ್ರಾಪರ್ಟಿ ಶೋ ಆಯೋಜಿತವಾಗಿದೆ.
ಸುಮಾರು 120 ಪ್ರತಿಷ್ಠಿತ ಡೆವಲಪರ್ಗಳು ಭಾಗಿಯಾಗಲಿದ್ದಾರೆ.
ಭಾರತದ 50ಕ್ಕೂ ಹೆಚ್ಚು ನಗರಗಳಲ್ಲಿನ ಸುಮಾರು 75,000 ಸಾವಿರ ಪ್ರಾಪರ್ಟಿಗಳ ಮಾರಾಟ ಮಾಹಿತಿ ಸಿಗಲಿದೆ.

ನಿವೇಶನ, ಮನೆ, ವಾಣಿಜ್ಯ ಕಟ್ಟಡಗಳ ಖರೀದಿ ಸಹಿತ ವಿವಿಧ ಅಪೇಕ್ಷೆಗಳಿಗೆ ಸೂಕ್ತ ಮಾರ್ಗದರ್ಶನ ಸಿಗಲಿದೆ.
ವಿಶೇಷ ವಿನಾಯಿತಿ ಸೌಲಭ್ಯಕ್ಕೆ ಈ ‘ಪ್ರಾಪರ್ಟಿ ಶೋ’ ವೇದಿಕೆ ಕಲ್ಪಸಿದೆ.
ವಿಶೇಷ ಸುಲಭ ಸೌಲಭ್ಯಗಳ ಮೂಲಕ ಖರೀದಿಸುವ ಸುವರ್ಣ ಅವಕಾಶ ಕಲ್ಪಿಸುವುದೇ ಸಂಘಟಕರ ಧ್ಯೇಯೋದ್ದೇಶ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಕೇಂದ್ರ ಸ್ಥಾಪಿಸಲಾಗಿದ್ದು, ಆಸಕ್ತರು +971561486141, +971509431529 ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ಸಂಘಟಕರು ತಿಳಿಸಿದ್ದಾರೆ.
























































ಪ್ರಾಪರ್ಟಿ ಶೋ ಹೈಲೈಟ್ಸ್ ಹೀಗಿದೆ:
