ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರದ ಅತ್ಯಂತ ಸೂಕ್ಷ್ಮ ಪ್ರದೇಶ, ದಕ್ಷಿಣದ ಅಯೋದ್ಯೆ ಎಂದೇ ಬಿಂಬಿತವಾಗಿರುವ ಚಿಕ್ಕಮಗಳೂರಿನ ಹಿಂದೂಗಳ ದಾರ್ಮಿಕ ಪುಣ್ಯ ಕ್ಷೇತ್ರ ಇನಾಮ್ ದತ್ತಾತ್ರೇಯ ಪೀಠದ ಮುಕ್ತಿಗಾಗಿ ಹಲವಾರು ದಶಕದ ಹೋರಾಟಕ್ಕೆ ಫಲ ಸಿಕ್ಕಿದೆ. ರಾಜ್ಯ ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು ಧಾರ್ಮಿಕ ದತ್ತಿ ಇಲಾಖೆಯು 8 ಜನರನ್ನು ಒಳಗೊಂಡ ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶವನ್ನು ಶಾಸಕ ಸಿ.ಟಿ ರವಿ ಸೇರಿದಂತೆ ಅನೇಕ ನಾಯಕರು ಸ್ವಾಹತಿಸಿದ್ದಾರೆ.
ವ್ಯವಸ್ಥಾಪನಾ ಸಮಿತಿ ಸದಸ್ಯರು:.
ಜಿ. ಹೆಚ್. ಹೇಮಂತ್ ಕುಮಾರ್ ಚಿಕ್ಕಮಗಳೂರು,
ಸುಮಂತ್ ನೆಮ್ಮಾರ್ ವಿಜಯಪುರ,
ಸತೀಶ್ ಅತ್ತಿಗುಂಡಿ, ಶ್ರೀಮತಿ ಶೀಲಾ ಅತ್ತಿಗುಂಡಿ,
ಲೀಲಾ ಬ್ಯಾಗದಹಳ್ಳಿ,
ಗುರುವೇಶ್ ಕಲ್ಲೇದೇವರಪುರ,
ಚೇತನ್ ನರಿಗುಡ್ಡನಹಳ್ಳಿ,
ಭಾಷಾ ಚಿಕ್ಕಮಗಳೂರು

























































