ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ಪರಿಷ್ಕರಣೆ ಪ್ರಕರಣದ ಎಲ್ಲಾ ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿರುವ ಕಾಂಗ್ರೆಸ್, ಈ ವಿಚಾರವಾಗಿ ದೆಹಲಿ ಮಟ್ಟದಲ್ಲೂ ಹೋರಾಟ ನಡೆಸಲು ಮುಂದಾಗಿದೆ.
ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುಮೊಟೊ ಪ್ರಕರಣ ದಾಖಲಿಸಬೇಕು ಎಂದು ಮನವಿ ಸಲ್ಲುಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇದೇ ವೇಳೆ, ಮತದಾರರ ಪಟ್ಟಿಯ ಅಕ್ರಮ ಪರಿಷ್ಕರಣೆ, ಮತದಾರರ ಮಾಹಿತಿ ಸಂಗ್ರಹ ಗಂಭೀರ ಅಪರಾಧ ಎಂದಿರುವ ಅವರು, ಚುನಾವಣಾ ಆಯೋಗವು ಈ ಪ್ರಕರಣವನ್ನು ಡಿವಿಸಿಗೆ ನೀಡಿದ್ದು, ಇದು ಡಿವಿಸಿಯಿಂದ ತನಿಖೆಯಾಗುವ ವಿಚಾರವಲ್ಲ ಹಾಗಾಗಿ ಕಾಂಗ್ರೆಸ್ ನಿಯೋಗವು ಶನಿವಾರ ಮಧ್ಯಾಹ್ನ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಲಿದೆ ಎಂದು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ಅಕ್ರಮ ಪರಿಷ್ಕರಣೆ, ಮತದಾರರ ಮಾಹಿತಿ ಸಂಗ್ರಹ ಗಂಭೀರ ಅಪರಾಧ.
ಚುನಾವಣಾ ಆಯೋಗವು ಈ ಪ್ರಕರಣವನ್ನು ಡಿವಿಸಿಗೆ ನೀಡಿದ್ದು, ಇದು ಡಿವಿಸಿಯಿಂದ ತನಿಖೆಯಾಗುವ ವಿಚಾರವಲ್ಲ.
ನಾಳೆ ಮಧ್ಯಾಹ್ನ ಚುನಾವಣಾ ಆಯೋಗದ ಅಧಿಕಾರಿಗಳನ್ನು ನಾನು, @siddaramaiah ಅವರು ಹಾಗೂ ಪಕ್ಷದ ಇತರೆ ನಾಯಕರು ಭೇಟಿ ಮಾಡಲಿದ್ದೇವೆ.
– @DKShivakumar pic.twitter.com/gPLkPALX7s— Karnataka Congress (@INCKarnataka) November 18, 2022

























































