ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಶುಕ್ರವಾರ 1,587 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಗುರುವಾರ ಸಂಜೆ ನಂತರ ಶುಕ್ರವಾರ ಸಂಜೆವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,587 ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 9,66,689ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1,037 ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ.
ಇದೇ ವೇಳೆ ಶುಕ್ರವಾರ ರಾಜ್ಯದಲ್ಲಿ ಕೊವಿಡ್ ಸೋಂಕಿಗೊಳಗಾದ 10 ಮಂದಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಹೇಳಿದೆ.
Today's Media Bulletin 19/03/2021
Please click on the link below to view bulletin.https://t.co/e8VidH5vAD @PMOIndia @narendramodi @CMofKarnataka @BSYBJP @MoHFW_INDIA @drharshvardhan @mla_sudhakar @Comm_dhfwka @MDNHM_Kar @CovidIndiaSeva @KarnatakaVarthe @PIBBengaluru pic.twitter.com/CjOXQd8vwz— K'taka Health Dept (@DHFWKA) March 19, 2021