ದೆಹಲಿ: ಕೊರೋನಾ ಸೋಂಕಿಗೊಳಗಾಗಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಅನೇಕರು ತಬ್ಬಲಿಗಳಾಗಿದ್ದಾರೆ. ಹಣ, ಐಶ್ವರ್ಯ ಯಾವುದು ಕೂಡಾ ಕೊರೋನಾ ಎದುರು ಮೇಲುಗೈ ಸಾಧಿಸಿಲ್ಲ ಎಂಬುದು ಅನೇಕರ ಮಾತುಗಳು.
ಇದೇ ಸಂದರ್ಭದಲ್ಲಿ ಕೋವಿಡ್‌ಗೆ ಬಲಿಯಾದ ನಟ ರಾಹುಲ್ ವೊಹ್ರಾ ಬರೆದಿಟ್ಟ ಬರಹ ನೋವಿನಕಥೆಯನ್ನು ಸಾರಿದೆ. ‘ನನಗೂ ಒಳ್ಳೆಯ ಚಿಕಿತ್ಸೆ ದೊರೆತಿದ್ದರೆ ಬದುಕುಳಿಯುತ್ತಿದ್ದೆ’ ಎಂದು ಸಾಯುವ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ನಟ ರಾಹುಲ್ ವೊಹ್ರಾ ಭಾನುವಾರ ಮೃತಪಟ್ಟಿದ್ದಾರೆ.
ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ದಿನೇ ದಿನೇ ಕುಸಿದಿದೆ. ಸಾವಿಗೂ ಒಂದು ದಿನದ ಮುಂಚೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ರಾಹುಲ್, ‘ನನಗೂ ಉತ್ತಮ ಚಿಕಿತ್ಸೆ ಸಿಕ್ಕಿದ್ದಿದ್ದರೆ ನಾನೂ ಬದುಕುಳಿಯುತ್ತಿದ್ದೆ’ ಎಂದು ಬರೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಡಿಸಿಎಂ ಮನಿಶ್ ಸಿಸೋಡಿಯಾ ಅವರ ಹೆಸರುಗಳನ್ನು ಉಲ್ಲೇಖಿಸಿದ್ದ ಈ ನಟ., ‘ಬಹಳ ಬೇಗನೇ ಮತ್ತೆ ಹುಟ್ಟಿ ಬರುತ್ತೇನೆ. ಒಳ್ಳೆ ಕೆಲಸ ಮಾಡುತ್ತೇನೆ’ ಎಂದಿದ್ದರು.
ನಟ ರಾಹುಲ್ ವೊಹ್ರಾ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ವೈರಲ್ ಆಗುತ್ತಿದೆ. ಈ ಸಂದೇಶವನ್ನು ಜನರು ಎಚ್ಚರಿಕೆಯ ಸಂದೇಶವಾಗಿಯೂ ರವಾನಿಸುತ್ತಿದ್ದಾರೆ.