ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆಯೇ? ಲಾಕ್’ಡೌನ್ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿದೆಯೇ? ಕೊರೊನಾ ನಿಯಂತ್ರಣಕ್ಕಾಗಿ ಸಾಮಗ್ರಿ ಖರೀದಿಯಲ್ಲಿ ಅಕ್ರಮಗಳಾಗಿವೆಯೇ? ಕೋವಿಡ್ ಚಿಕಿತ್ಸೆ ಹಾಗೂ ಕ್ವಾರಂಟೈನ್ ವಿಚಾರದಲ್ಲಿ ಅವ್ಯವಾರ ನಡೆದಿದೆಯೇ?
ಈ ರೀತಿಯ ಕೊರೋನಾ ನಿಯಂತ್ರಣ ಸಂಬಂಧದ ವ್ಯವಹಾರ ಬಗ್ಗೆ ಗಂಭೀರ ಆರೋಪಗಳು ರಾಜ್ಯ ಸರ್ಕಾರದ ವಿರುದ್ಧ ಕೇಳಿಬರುತ್ತಿವೆ. ಈ ಆರೋಪಗಳ ಬಗ್ಗೆ ಕೆಲವು ದಿನಗಳಿಂದ ಹೇಳಿಕೆಗಳ ಮೂಲಕ ತಮ್ಮದೇ ಶಾಲಿಯಲ್ಲಿ ಹೋರಾಟ ನಿರತರಾಗಿರುವ ವಿಧಾಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇದೀಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮತ್ತಷ್ಟು ಸಿಟ್ಟು ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೊರೋನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಡಿರುವ ವೆಚ್ಚಗಳ ಲೆಕ್ಕ ಕೇಳಿದ್ದಾರೆ. ಅವರ ಈ ನಡೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಅವರು ಕೇಳಿರುವ ಸಾಲು-ಸಾಲು ಪ್ರಶ್ನೆಗಳು ಹೀಗಿವೆ:
- ಕೊರೊನಾ ನಿಯಂತ್ರಣಕ್ಕಾಗಿ ಎಷ್ಟು ಪ್ರಮಾಣದ ಸಾಮಗ್ರಿ ಖರೀದಿಸಲಾಗಿದೆ?
- ಪ್ರತಿ ಸಾಮಗ್ರಿಯ ಬೆಲೆಯೆಷ್ಟು? ಬಿಡ್/ಕೊಟೇಷನ್ ಮೂಲಕ ಪಾಲ್ಗೊಂಡ ಸಂಸ್ಥೆಗಳು ಯಾವುವು?
- ಸರಬರಾಜು ಆದೇಶ ಪಡೆದುಕೊಂಡ ಸಂಸ್ಥೆ ಯಾವುದು? ಹೆಚ್ಚುದರ ಕೋಟ್ ಮಾಡಿದ ಕಂಪೆನಿಗೆ ಸರಬರಾಜು ಆದೇಶ ನೀಡಿರುವ ಪ್ರಕರಣಗಳೆಷ್ಟು? ಕಾರಣಗಳೇನು?
ಕೊರೊನಾ ನಿಯಂತ್ರಣಕ್ಕಾಗಿ ಎಷ್ಟು ಪ್ರಮಾಣದ ಸಾಮಗ್ರಿ ಖರೀದಿಸಲಾಗಿದೆ? ಪ್ರತಿ ಸಾಮಗ್ರಿಯ ಬೆಲೆಯೆಷ್ಟು?
ಬಿಡ್/ಕೊಟೇಷನ್ ಮೂಲಕ ಪಾಲ್ಗೊಂಡ ಸಂಸ್ಥೆಗಳು ಯಾವುವು? ಸರಬರಾಜು ಆದೇಶ ಪಡೆದುಕೊಂಡ ಸಂಸ್ಥೆ ಯಾವುದು?
ಹೆಚ್ಚುದರ ಕೋಟ್ ಮಾಡಿದ ಕಂಪೆನಿಗೆ ಸರಬರಾಜು ಆದೇಶ ನೀಡಿರುವ ಪ್ರಕರಣಗಳೆಷ್ಟು? ಕಾರಣಗಳೇನು?
2/8#LekkaKodi pic.twitter.com/xfxNlZcn2l— Siddaramaiah (@siddaramaiah) July 14, 2020
- ಕೊರೊನಾ ನಿಯಂತ್ರಣ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ತಕರಾರುಗಳಿದ್ದರೂ ಪಾವತಿ ಮಾಡಲಾದ ಹಣ ಎಷ್ಟು?
- ಕೇಂದ್ರ ಸರ್ಕಾರ ಖರೀದಿ ಮಾಡಿದ ಸಾಮಗ್ರಿಗಳು ಯಾವುವು?
- ಅವುಗಳಲ್ಲಿ ಕಳಪೆಯಾಗಿದೆ ಎಂದು ಬಂದ ದೂರುಗಳೆಷ್ಟು? ಆ ದೂರುಗಳ ಕುರಿತು ಕೈಗೊಂಡಿರುವ ಕ್ರಮಗಳೇನು?
- ಕೇಂದ್ರ ಮತ್ತು ರಾಜ್ಯ ಸರ್ಕಾರ ಖರೀದಿಸಿದ ಸಾಮಗ್ರಿಗಳನ್ನು ಎಲ್ಲೆಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ?
- ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಎಷ್ಟು? ಅದರಲ್ಲಿ ಖರ್ಚು ಮಾಡಲಾದ ಅನುದಾನ ಎಷ್ಟು?
- ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು? ಖರ್ಚಾಗಿರುವುದು ಎಷ್ಟು?
- ಕೊರೊನಾ ನಿಯಂತ್ರಣ ಸಾಮಗ್ರಿ ಸರಬರಾಜು ಆದೇಶ ಪಡೆದ ಕಂಪೆನಿ ಸರಬರಾಜು ಮಾಡಿದ ಉತ್ಪನ್ನಗಳ ಪ್ರಮಾಣ ಎಷ್ಟು?
- ಗುಣಮಟ್ಟ ಸರಿಇಲ್ಲದ ಕಾರಣಕ್ಕೆ ತಿರಸ್ಕರಿಸಲ್ಪಟ್ಟ ಸಾಮಗ್ರಿಗಳು ಯಾವುವು?
- ಕಳಪೆ ಸಾಮಗ್ರಿ ಸರಬರಾಜು ಮಾಡಿದ ಕಂಪೆನಿಗಳು ಯಾವುವು? ಕಳಪೆ ಸಾಮಗ್ರಿಗಳ ಪ್ರಮಾಣ ಎಷ್ಟು?
ಕೊರೊನಾ ನಿಯಂತ್ರಣ ಸಾಮಗ್ರಿ ಸರಬರಾಜು ಆದೇಶ ಪಡೆದ ಕಂಪೆನಿ ಸರಬರಾಜು ಮಾಡಿದ ಉತ್ಪನ್ನಗಳ ಪ್ರಮಾಣ ಎಷ್ಟು?
ಗುಣಮಟ್ಟ ಸರಿಇಲ್ಲದ ಕಾರಣಕ್ಕೆ ತಿರಸ್ಕರಿಸಲ್ಪಟ್ಟ ಸಾಮಗ್ರಿಗಳು ಯಾವುವು?ಕಳಪೆ ಸಾಮಗ್ರಿ ಸರಬರಾಜು ಮಾಡಿದ ಕಂಪೆನಿಗಳು ಯಾವುವು?
ಕಳಪೆ ಸಾಮಗ್ರಿಗಳ ಪ್ರಮಾಣ ಎಷ್ಟು?
5/8#LekkaKodi pic.twitter.com/9nbV6AHbgk— Siddaramaiah (@siddaramaiah) July 14, 2020
- ಕೊರೊನಾ ನಿಯಂತ್ರಣಕ್ಕಾಗಿ ಎಸ್ಡಿಆರ್ಎಫ್ ಮತ್ತು ಎನ್ ಡಿ ಆರ್ ಎಫ್ ಅನುದಾನದಲ್ಲಿ ಜಿಲ್ಲೆಗಳಿಗೆ ಹಂಚಿಕೆ ಮಾಡಿದ ಹಣ ಎಷ್ಟು?
- ಆ ಅನುದಾನದಲ್ಲಿ ಜಿಲ್ಲಾಡಳಿತಗಳು ಯಾವ ಉದ್ದೇಶಕ್ಕೆ ಎಷ್ಟು ಖರ್ಚು ಮಾಡಿದೆ?
- ಆಹಾರ,ಆಹಾರ ಧಾನ್ಯಗಳ ಕಿಟ್ ಗಳು, ಹಾಲು ಮುಂತಾದವುಗಳನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಿದೆ? ಪ್ರ
- ತಿ ಆಹಾರ ಪ್ಯಾಕೇಟ್/ ಆಹಾರ ಧಾನ್ಯಗಳ ಪ್ಯಾಕೇಟ್ ಕಿಟ್ ಗೆ ನೀಡಿದ ಕನಿಷ್ಠ/ಗರಿಷ್ಠ ದರ ಎಷ್ಟು?
- ಆಹಾರ ತಯಾರಿಸಿದ ಸಂಸ್ಥೆಗಳು ಯಾವುವು? ಯಾವ ಸಂಸ್ಥೆಗಳಿಗೆ ಎಷ್ಟು ಹಣ ನೀಡಲಾಗಿದೆ?
ಆಹಾರ,ಆಹಾರ ಧಾನ್ಯಗಳ ಕಿಟ್ ಗಳು, ಹಾಲು ಮುಂತಾದವುಗಳನ್ನು ಎಷ್ಟು ಪ್ರಮಾಣದಲ್ಲಿ @CMofKarnataka ವಿತರಿಸಿದೆ?
ಪ್ರತಿ ಆಹಾರ ಪ್ಯಾಕೇಟ್/ ಆಹಾರ ಧಾನ್ಯಗಳ ಪ್ಯಾಕೇಟ್ ಕಿಟ್ ಗೆ ನೀಡಿದ ಕನಿಷ್ಠ/ಗರಿಷ್ಠ ದರ ಎಷ್ಟು?
ಆಹಾರ ತಯಾರಿಸಿದ ಸಂಸ್ಥೆಗಳು ಯಾವುವು? ಯಾವ ಸಂಸ್ಥೆಗಳಿಗೆ ಎಷ್ಟು ಹಣ ನೀಡಲಾಗಿದೆ?
7/8#LekkaKodi pic.twitter.com/3UcaphFlE1— Siddaramaiah (@siddaramaiah) July 14, 2020
- ರಾಜ್ಯದಲ್ಲಿ ಒಟ್ಟು ಎಷ್ಟು ಕ್ವಾರಂಟೈನ್ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ?
- ಪ್ರತಿ ಕ್ವಾರಂಟೈನ್ ಕೇಂದ್ರಕ್ಕೆ ಇಲ್ಲಿಯ ವರೆಗೆ ಖರ್ಚು ಮಾಡಿದ ದುಡ್ಡೆಷ್ಟು?
- ಯಾವ ಬಾಬತ್ತಿಗೆ ಖರ್ಚು ಮಾಡಲಾಗಿದೆ?
- ಕ್ವಾರಂಟೈನ್ ಗೊಳಗಾದ ಪ್ರತಿ ವ್ಯಕ್ತಿಗೆ ತಗಲಿರುವ ಖರ್ಚೆಷ್ಟು?
ರಾಜ್ಯದಲ್ಲಿ ಒಟ್ಟು ಎಷ್ಟು ಕ್ವಾರಂಟೈನ್ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ?
ಪ್ರತಿ ಕ್ವಾರಂಟೈನ್ ಕೇಂದ್ರಕ್ಕೆ ಇಲ್ಲಿಯ ವರೆಗೆ ಖರ್ಚು ಮಾಡಿದ ದುಡ್ಡೆಷ್ಟು?
ಯಾವ ಬಾಬತ್ತಿಗೆ ಖರ್ಚು ಮಾಡಲಾಗಿದೆ?
ಕ್ವಾರಂಟೈನ್ ಗೊಳಗಾದ ಪ್ರತಿ ವ್ಯಕ್ತಿಗೆ ತಗಲಿರುವ ಖರ್ಚೆಷ್ಟು?@CMofKarnataka
8/8#LekkaKodi pic.twitter.com/AHHZL4qgPP— Siddaramaiah (@siddaramaiah) July 14, 2020