‘ಸಿಎಂ ಬದಲಾವಣೆ ಅನಿವಾರ್ಯ.. ಹಾಗಾದಲ್ಲಿ ಮಾತ್ರ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ’ ಈ ಜ್ಯೋತಿಷಿಯ ಭವಿಷ್ಯವಾಣಿಯನ್ನು ಅಲ್ಲಗಳೆಯವಂತಿಲ್ಲ.
ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಆಡಳಿತ ಬಗ್ಗೆ ಪ್ರತಿಪಕ್ಷಗಳಷ್ಟೇ ಅಲ್ಲ, ಬಿಜೆಪಿಯ ಮಾತೃಸಂಘಟನೆಯಾದ ಆರೆಸ್ಸೆಸ್ ಕಾರ್ಯಕರ್ತರೂ ಮುನಿಸಿಕೊಂಡಿದ್ದಾರೆ. ಇದೀಗ ‘ಪೇಸಿಎಂ’, ‘ಸೇ ಸಿಎಂ’ ಎಂದೆಲ್ಲಾ ಸರಣಿ ಅಭಿಯಾನಗಳು ಬಿರುಸುಗೊಂಡಿದ್ದು, ಕಮೀಷನ್ ದಂಧೆಯ ಆರೋಪದ ಹೊಡೆತವಷ್ಟೇ ಅಲ್ಲ, ರಾಜಧಾನಿ ಬೆಂಗಳೂರಿನ ಗುಂಡಿ ಗಂಡಾಂತರವೂ ‘ಬೊಮ್ಮಾಯಿ ಸರ್ಕಾರದ ಕಳಪೆ’ಗೆ ಸಾಕ್ಷಿಯಾಗಿದೆ ಎಂಬುದು ಬಿಜೆಪಿ ಕಾರ್ಯಕರ್ತರದ್ದೇ ಅಸಮಾಧಾನದ ಮಾತುಗಳು.
ಈ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಸೂಕ್ತವಲ್ಲವೇ? ಎಂಬ ಚರ್ಚೆ ಬಿಜೆಪಿ ವರಿಷ್ಠರ ಪಾಳಯದಲ್ಲಿ ನಡೆದಿದೆ. ಅದಾಗಲೇ ಖ್ಯಾತ ಜ್ಯೋತಿಷಿ ಅನಿರುಧ್ ಕುಮಾರ್ ಮಿಶ್ರಾ ಹೇಳಿರುವ ಭವಿಷ್ಯ ಬಿಜೆಪಿ ಪಾಳಯದಲ್ಲೇ ಸಂಚಲನ ಮೂಡಿಸಿದೆ.
Due to wrong birth timing, I am correcting this prediction as the elections are in May 2023, while it is October 2022 right now,
From now till March 2023, the CM of Karnataka Basavaraj Bommai will be replaced, and BJP will get the full majority. pic.twitter.com/oC7gUbTsMs
— Anirudh Kumar Mishra (Astrologer) (@Anirudh_Astro) October 19, 2022
ಅನಿರುಧ್ ಕುಮಾರ್ ಮಿಶ್ರಾ ಅವರ ಪ್ರಕಾರ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಬದಲಾಯಿಸಲೇಬೇಕು. “From now till March 2023, the CM of Karnataka Basavaraj Bommai will be replaced” ಎಂದು ಈ ಜ್ಯೋತಿಷಿ ಬಿಜೆಪಿ ಹೈಕಮಾಂಡ್‌ನ ಗಮನಸೆಳೆದಿದ್ದಾರೆ. ‘2013ರ ಮಾರ್ಚ್ ತಿಂಗಳೊಳಗಾಗಿ ಕರ್ನಾಟಕದ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಿದೆ. ಹಾಗೊಂದು ವೇಳೆ ಬದಲಾಯಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ’ ಎಂದು ಅನಿರುಧ್ ಕುಮಾರ್ ಶರ್ಮಾ ಭವಿಷ್ಯ ಹೇಳಿದ್ದಾರೆ.
ಮೈಸೂರು ದಸರಾದ ಫೊಟೋ ಹಾಕಿ, ಕರ್ನಾಟಕ ರಾಜಕಾರಣ ಕುರಿತು ಅವರು ಮಾಡಿರುವ ಟ್ವೀಟ್ ಎಲ್ಲರ ಗಮನ ಕೇಂದ್ರೀಕರಿಸಿದೆ.
ಯಾರು ಈ ಅನಿರುಧ್..?
ಅನಿರುಧ್ ಕುಮಾರ್ ಶರ್ಮಾ ಅವರು ಈ ಹಿಂದೆಯೂ ಕರ್ನಾಟಕ ರಾಜ್ಯ ರಾಜಜಾರಣದ ಬಗ್ಗೆ ಭವಿಷ್ಯ ನುಡಿದಿದ್ದರು. ಅಕ್ಟೋಬರ್ ತಿಂಗಳಲ್ಲೇ ಮುಖ್ಯಮಂತ್ರಿ ಬದವಣೆಯಾಗುತ್ತದೆ ಎಂದು ಹೇಳಿದ್ದರು. ಆದರೆ ಅದು ಸತ್ಯವಾಗಲಿಲ್ಲ.
ಆ ಭವಿಷ್ಯ ಬಗ್ಗೆ ಸ್ಪಷ್ಟನೆ ನೀಡಿರುವ ಅನಿರುಧ್ ಕುಮಾರ್ ಶರ್ಮಾ, ‘Due to wrong birth timing, I am correcting this prediction as the elections are in May 2023, while it is October 2022 right now’ ಎಂದಿದ್ದಾರೆ.
ಇದೀಗ ಅನಿರುಧ್ ಅವರ ಭವಿಷ್ಯವಾಣಿಯು ಬಿಜೆಪಿ ಪಾಳಯದಲ್ಲಿ ಹಲವಾರು ಲೆಕ್ಕಾಚಾರಕ್ಕೆ ಕಾರಣವಾಗಿದೆ. ಯಾಕೆಂದರೆ ಬಿಜೆಪಿ ವರಿಷ್ಠರ ಪೈಕಿ ಅನೇಕ ಮುಖಂಡರು ಅನಿರುದ್ಧ್ ಅವರ ಭವಿಷ್ಯವಾಣಿಯಲ್ಲಿ ನಂಬಿಕೆ ಇಟ್ಟಿರುವವರು. ಅನೇಕ ನಾಯಕರು ಇವರ ಮಾರ್ಗದರ್ಶನವನ್ನೇ ಆಧರಿಸಿ ತೀರ್ಮಾನ ಕೈಗೊಳ್ಳುವವರು. ಬಿಜೆಪಿಯಷ್ಟೇ ಅಲ್ಲ, ಹಿಂದೂ ಮುಖಂಡರೂ ಇವರ ಮಾತಿಗೆ ಕಟ್ಟಿಬಿದ್ದಿದ್ದುಂಟು. ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣ ಸಹಿತ ಅನೇಕ ವಿದ್ಯಮಾನಗಳಲ್ಲಿ ಈ ಜ್ಯೋತಿಷ್ಯವನ್ನು ಪರಿಗಣಿಸಲಾಗಿದೆ. ಇಸ್ರೋ ಸಹಿತ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳೂ ಈ ಜ್ಯೋತಿಷಿಯ ಅಭಿಪ್ರಾಯಗಳನ್ನು ಆಧರಿಸಿವೆ ಎಂದೂ ತಜ್ಞರು ಹೇಳುತ್ತಾರೆ.
This astrologer had predicted exactly when Ram Mandir in Ayodhya will be a reality https://t.co/KYge9HgyGz via @OpIndia_com
— Anirudh Kumar Mishra (Astrologer) (@Anirudh_Astro) August 30, 2022
ಈ ಹಿಂದೆಯೂ ಕರ್ನಾಟಕ ರಾಜಕಾರಣದ ವಿದ್ಯಮಾನಗಳತ್ತ ಅವರು ಬೆಳಕು ಚೆಲ್ಲಿದ್ದ ವಿಚಾರಗಳು ನುಡಿದಂತೆಯೇ ಆಗಿದೆ ಎಂಬುದು ಹಲವರ ಮಾತುಗಳು. ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಬಿಜೆಗೆ ಸಿಗಬಹುದಾದ ಬಹುತದದ ಲೆಕ್ಕಾಚಾರ, ಕಾಂಗ್ರೆಸ್ ಸರ್ಕಾರದ ಪತನ ಸಾಧ್ಯತೆಯ ಮುನ್ಸೂಚನೆಗಳೂ ಸುಳ್ಳಾಗಿಲ್ಲ.
There will be a BJP led government in Karnataka. It may require a support of nearly+5 seats. pic.twitter.com/wJUttmlkHs
— Anirudh Kumar Mishra (Astrologer) (@Anirudh_Astro) March 29, 2018
ಹಾಗಾಗಿ ಈ ಬಾರಿ ಇವರು ಕರ್ನಾಟಕ ರಾಜಕಾರಣ ಕುರಿತಂತೆ ಮತ್ತೊಮ್ಮೆ ಹೇಳಿರುವ ಸಂಭವನೀಯ ಮಾತುಗಳು ತೀವ್ರ ಕುತೂಹಲ ಕೆರಳುವಂತೆ ಮಾಡಿವೆ.
Congress government will have to loose Karnataka. @OfficeOfRG pic.twitter.com/PHKmSfr7gN
— Anirudh Kumar Mishra (Astrologer) (@Anirudh_Astro) October 17, 2017
























































