ಚಿಕ್ಕಮಗಳೂರು: ಅಂತಾರಾಷ್ಟ್ರೀಯ ಯೋಗ ದಿನವನ್ನು ಇಂದು ಎಲ್ಲೆಡೆ ಆರೋಗ್ಯ ಸೂತ್ರವನ್ನಾಗಿ ರೂಢಿಸಲಾಯಿತು. ದೇಶಾದ್ಯಂತ ಯೋಗ ದಿನಾಚರಣೆ ಮೂಲಕ ಆರೋಗ್ಯ ಸಮಾಜದ ಸಂಕಲ್ಪ ಮಾಡಲಾಯಿತು.
ಈ ಬಾರಿ ರಾಜ್ಯದ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಎಲ್ಲರ ಕುತೂಹಲದ ಕೇಂದ್ರ ಬಿಂದುವಾದರು. ಇನ್ನೊಂದೆಡೆ ಚಿಕ್ಕಮಗಳೂರಿನ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪಾಲ್ಗೊಂಡರು. ಅವರು ಯೋಗ ವ್ಯಾಯಾಮದಲ್ಲಿ ಭಾಗಿಯಾಗಿ ಯುವಜನರಲ್ಲಿ ಉತ್ಸಾಹ ತುಂಬಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಚಿಕ್ಕಮಗಳೂರು, ವಿಶ್ವಯೋಗ ದಿನಾಚರಣೆ ಸಮಿತಿ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ 8 ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಇದಾಗಿತತ್ತು.
Glimpses of the #InternationalDayofYoga celebrations organised by the district administration at Chikkamagaluru.
It is important that everyone makes Yoga a part of life to build a Healthy and Peaceful #NewIndia. pic.twitter.com/3EiN8UcsDJ
— C T Ravi 🇮🇳 ಸಿ ಟಿ ರವಿ (@CTRavi_BJP) June 21, 2022
;


















































