ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ‘ರಾಬರ್ಟ್’ ಬಗ್ಗೆ ಭಾರೀ ನಿರೀಕ್ಷೆ ಹೊಂದಿದ್ದಾರೆ. ಈ ತಿಂಗಳ 11ರಂದು ‘ರಾಬರ್ಟ್’ ತೆರೆ ಕಾಣಲಿದೆ.
ಕುರುಕ್ಷೇತ್ರ ಯಶಸ್ಸಿನ ನಂತರ ದರ್ಶನ್ ನಟನೆಯ ಮತ್ತೊಂದು ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ‘ರಾಬರ್ಟ್’ ಚಿತ್ರ ಬಿಡುಗಡೆಯಾಗಲಿದೆ. ರಿಲೀಸ್‌ಗೂ ಮೊದಲೇ ಭಾರೀ ಸದ್ದು ಮಾಡುತ್ತಿರುವ ‘ರಾಬರ್ಟ್’ ಸಿನಿಮಾದ ವಿತರಣೆ ಹಕ್ಕು ಕೂಡಾ ದಾಖಲೆ ಬೆಲೆ ಮಾರಾಟವಾಗಿ ಸುದ್ದಿಯಾಗಿದೆ. ಕರ್ನಾಟಕದಲ್ಲೇ ಬರೋಬ್ಬರಿ 78 ಕೋಟಿ ರೂಪಾಯಿಗೆ ‘ರಾಬರ್ಟ್’ ಸಿನಿಮಾ ಹಂಚಿಕೆಯಾಗಿದ್ದು ಇನ್ನು ಕಲೆಕ್ಷನ್‌ನಲ್ಲೂ ಭಾರೀ ನಿರೀಕ್ಷೆಯನ್ನು ಸಿನಿಮಾ ತಂಡ ಹೊಂದಿದೆ. ಆದರೆ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಪರಿಸ್ಥಿತಿಯೇ ಚಾಲೆಂಜಿಂಗ್ ಸ್ಟಾರ್ ಜೊತೆಗಿರುವ ‘ರಾಬರ್ಟ್’ಗೆ ಸವಾಲು..