‘ಜೊತೆಜೊತೆಯಲಿ’ ಕನ್ನಡ ಧಾರವಾಹಿ ಮನೆಮಾತಾಗಿದೆ. ಈ ಜನಪ್ರಿಯ ಧಾರವಾಹಿಯ ನಟಿ ಮೇಘಾ ಶೆಟ್ಟಿ ಇದೀಗ ಕನ್ನಡ ಆಲ್ಬಂ ವಿಡಿಯೋ ಸಾಂಗ್ ಮೂಲಕ ಮತ್ತಷ್ಟು ಸುದ್ದಿಯಲ್ಲಿದ್ದಾರೆ. ಈ ಆಲ್ಬಾಂ ಸಾಂಗ್ ಸಜತ್ ಹಿಟ್ ಆಗಿದ್ದು ಅದರಲ್ಲಿ ಮೇಘನಾ ಶೆಟ್ಟಿ ಸ್ಟೆಪ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಲೈಕ್ಸ್ ಸಿಗುತ್ತಿವೆ.
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ ಹಾಡಿರುವ ಈ ಆಲ್ಬಂ ಸಾಂಗ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯಗಟ್ಟಲೆ ವೀವ್ಸ್ ಮೂಲಕ ಭಾರೀ ಸದ್ದು ಮಾಡುತ್ತಿದೆ