ವಿದ್ಯಾರ್ಥಿನಿಯ ‘ಐಪಿಎಸ್’ ಕನಸಿಗೆ ಆಸರೆಯಾದ ಎಂಆರ್‌ಎನ್ ಫೌಂಡೇಶನ್.. ಸಚಿವ ನಿರಾಣಿಗೆ ‘ಬೇಟಿ ಬಚಾಚೋ, ಬೇಟಿ ಪಡಾವೋ’ ಸೂತ್ರವೇ ಪ್ರೇರಣೆಯಂತೆ.. ವಿಶ್ವ ಮಹಿಳಾ ದಿನದಂದು ಮುನ್ನಲೆಗೆ ಬಂದಿದೆ ಈ ಸೇವೆಯ ಸುದ್ದಿ..
ಬೆಂಗಳೂರು: ಜೀವನದಲ್ಲಿ ‘ಐಪಿಎಸ್’ ಅಧಿಕಾರಿಯಾಗಬೇಕೆಂಬ ಛಲ ಆ ವಿದ್ಯಾರ್ಥಿನಿಗೆ ಇತ್ತು.ಆದರೆ, ಮನೆಯಲ್ಲಿ ಎದುರಾದ ಆರ್ಥಿಕ ಸಂಕಷ್ಟ ತಾಯಿಯೇ ದುಡಿಯಬೇಕಾದ ಅನಿವಾರ್ಯತೆ,ದುಡಿಯಲು ಕೆಲಸವಿಲ್ಲದ ಕಾರಣ, ಆಕೆಯ ಕನಸು ಕನಸಾಗಿಯೇ ಉಳಿಯುವ ಆತಂಕದಲ್ಲಿತ್ತು.ಇನ್ನೇನು ನನ್ನ ಕನಸು ಈಡೇರುವುದಿಲ್ಲ ಎಂದು ಚಿಂತೆಯಲ್ಲಿದ್ದ ಆ ವಿದ್ಯಾರ್ಥಿನಿ ಪಾಲಿಗೆ ‘ಸಂಜೀವಿನಿ’ ಯಂತೆ ಆಸರೆಯಾಗಿದ್ದು ‘ಎಂಆರ್‌ಎನ್ ಫೌಂಡೇಶನ್’.
ಅಚ್ಚರಿಯಾದರೂ ಇದು ಸತ್ಯ.!
ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ ಎಂಆರ್‌ಎನ್ ಫೌಂಡೇಶನ್ ಇದೀಗ ವಿದ್ಯಾರ್ಥಿನಿಯೊಬ್ಬಳ ಜೀವನಕ್ಕೆ ‘ಆಸರೆ’ಯಾಗುವ ಮೂಲಕ ಮಾನವೀಯತೆ ತೋರಿದೆ.
‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’
ಸಂದರ್ಭದಲ್ಲಿ ಎಂಆರ್‌ಎನ್ ಫೌಂಡೇಶನ್‌ನ ಈ ಸಾಮಾಜಿಕ ಕಳಕಳಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದೀಪಾ ಎಂಬ ಗೃಹಿಣಿಗೆ ಮೂವರು ಮಕ್ಕಳು (ಇಬ್ಬರು ಹೆಣ್ಣು, ಒಂದು ಗಂಡು ಮಗು) ಇದರಲ್ಲಿ ಜಯಶ್ರೀ 9 ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ. ತನ್ನ ಮಕ್ಕಳನ್ನು ಎಲ್ಲರಂತೆ ಓದಿಸಬೇಕೆಂಬ ಛಲ ತಾಯಿಯಲ್ಲಿತ್ತು. ಆದರೆ, ಕೋವಿಡ್ -19 ಕಾರಣ,ಸರಿಯಾದ ಕೆಲಸವು ಇಲ್ಲದಿದ್ದರಿಂದ ಮಕ್ಕಳನ್ನು ಹೇಗೆ? ಓದಿಸಬೇಕೆಂಬ ಚಿಂತೆ ಎದುರಾಯಿತು. ಒಂದು ಕಡೆ ಕುಟುಂಬದ ನಿರ್ವಾಹಣೆ, ಮಕ್ಕಳ ಭವಿಷ್ಯ, ಕೈಯಲ್ಲಿ ಕೆಲಸವೂ ಇಲ್ಲದೆ, ಮಾನಸಿಕ ತೊಳಲಾಟಕ್ಕೆ ಸಿಕ್ಕಾಗ ಅವರ ‘ ನೆರವಿಗೆ’ ಬಂದಿದ್ದೇ, ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರ ನೇತೃತ್ವದ ಎಂಆರ್‌ಎನ್ ಫೌಂಡೇಶನ್.
ವಿದ್ಯಾರ್ಥಿನಿ ಜಯಶ್ರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವಿಷಯ ಸಚಿವ ಮುರುಗೇಶ್ ನಿರಾಣಿ ಅವರ ಗಮನಕ್ಕೆ ಬಂದಿತು. ಕೂಡಲೇ ಪೋಷಕರನ್ನು ಸಂಪರ್ಕಿಸಿದ ಅವರು, ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಅಗತ್ಯವಾದ ನೆರವು ನೀಡಲಾಗುವುದು.ಯಾವುದೇ ಕಾರಣಕ್ಕೂ ಅಭ್ಯಾಸವನ್ನು ಅರ್ಧಕ್ಕೆ ಮೊಟಕುಮಾಡಬೇಡಿ ಎಂದು ದೈರ್ಯ ತುಂಬಿದರು..
ನಮ್ಮ ಫೌಂಡೇಶನ್ ವತಿಯಿಂದ ವಿದ್ಯಾರ್ಥಿನಿಯ ವ್ಯಾಸಂಗಕ್ಕೆ ಏನೇಲ್ಲಾ ಬೇಕೋ ಅದೆಲ್ಲವನ್ಮೂ ಒದಗಿಸಲಾಗುವುದು. ಆಕೆಯ ಇಚ್ಛೆಯಂತೆ ಐಪಿಎಸ್ ವ್ಯಾಸಂಗಕ್ಕೆ ಅಗತ್ಯ ನೆರವು ನೀಡಲಾಗುವುದು.ನೀವು ಹಣಕಾಸಿನ ಬಗ್ಗೆ ನೀವು ಚಿಂತೆ ಮಾಡಬೇಡಿ ಎಂದು ನಿರಾಣಿ ಅವರು ಹೇಳುತ್ತಿದ್ದಾಗ ಅವರಲ್ಲಿ ಅಂತಕರಣದ ಕಳಕಳಿ ಕಾಣುತ್ತಿತ್ತು.
ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಒತ್ತು ಕೊಟ್ಟಿದ್ದಾರೆ. “ಬೇಟಿ ಬಚವೋ,ಬೇಟಿ ಪಡಾವೋ” ಎಂಬ ಯೋಜನೆ ಮೂಲಕ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬುದು ಅವರ ಮೂಲ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ನಾವು ನಮ್ಮ ಫೌಂಡೇಶನ್ ಮೂಲಕ ಸಣ್ಣದೊಂದು ಸೇವೆ ಮಾಡುತ್ತಿದ್ದೇವೆಂದು ಸಚಿವ ನಿರಾಣಿ ಹೇಳುತ್ತಾರೆ.
ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ. ಅದೇ ರೀತಿ ಆರ್ಥಿಕವಾಗಿ ಸಬಲರಾಗಿರುವವರು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಉಂಟು ಮಾಡಬೇಕಾದ ಅಗತ್ಯವಿದೆ ಎನ್ನುತ್ತಾರೆ ನಿರಾಣಿ.
ಜಯಶ್ರೀ ತಾಯಿ ದೀಪಾ ಅವರು, ಎಂಆರ್‌ಎನ್ ಫೌಂಡೇಶನ್ ನ ಸಾಮಾಜಿಕ ಕಳಕಳಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ನನಗೆ ಮಗಳ ಭವಿಷ್ಯದ ಚಿಂತೆ ಕಾಡುತ್ತಿತ್ತು. ಮನೆಯಲ್ಲಿ ಹಣಕಾಸಿನ ಬಿಕ್ಕಟ್ಟು, ಕೈಯಲ್ಲಿ ಕೆಲಸವು ಇಲ್ಲ. ಇಂತಹ ಸಂದರ್ಭದಲ್ಲಿ ನಮಗೆ ದಾರಿ ತೋರಿದ್ದು, ಎಂಆರ್‌ಎನ್ ಫೌಂಡೇಶನ್. ಮುರುಗೇಶ್ ನಿರಾಣಿ ಹಾಗೂ ಅವರ ಕುಟುಂಬದವರ ನೆರವನ್ನು ಎಂದಿಗೂ ಮರೆಯುವುದಿಲ್ಲ ಎಂದಾಗ ಆಕೆಯ ಕಣ್ಣಾಲಿಗಳು ತುಂಬಿದ್ದವು.
ನಮ್ಮ ಮನೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವಾಗ ನನ್ನ ವಿದ್ಯಾಭ್ಯಾಸ ಅರ್ಧಕ್ಕೆ ನಿಂತು ಹೋಗ ಬಹುದೆಂಬ ಆತಂಕ ಉಂಟಾಗಿತ್ತು. ನಮ್ಮ ತಾಯಿ ನಮ್ಮನ್ನು ಓದಿಸಬೇಕೆಂಬ ಗುರಿ ಇಟ್ಟುಕೊಂಡಿದ್ದರೂ ಮನೆಯಲ್ಲಿದ್ದ ಸಮಸ್ಯೆಗಳಿಂದಾಗಿ ನನ್ನ ಗುರಿ ಮುಟ್ಟುತ್ತೇನೋ ಇಲ್ಲವೊ ಎಂಬ ಆತಂಕ ಇತ್ತು. ಇದೀಗ ಎಂಆರ್ ಎನ್ ಫೌಂಡೇಶನ್ ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಮುಂದೆ ಬಂದಿರುವುದು ಸ್ವಾಗತಾರ್ಹ ಎನ್ನುತ್ತಿದ್ದಾರೆ ಜಯಶ್ರೀ.
ನನ್ನಚ್ಛೆಯಂತೆ ನಾನು ಐಪಿಎಸ್ ಓದಿ ಮುಂದೆ
ನನ್ನ ಪೋಷಕರನ್ನು ನೋಡಿಕೊಳ್ಳುತ್ತೇನೆ.
ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೊಸದೊಂದು ಕ್ರಾಂತಿ ಸೃಷ್ಟಿಸುತ್ತೇನೆ ಎಂದು ಜಯಶ್ರೀ ಹೆಮ್ಮೆಯಿಂದ ಹೇಳುತ್ತಾರೆ.