ಬೆಂಗಳೂರು: ವಿವಾದಿತ ಸಿಡಿಯಿಂದಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಹಸ್ಯ ತಂತ್ರಗಾರಿಕೆಯಲ್ಲಿ ತೊಡಗಿದ್ದ ರಮೇಶ್ ಜಾರಕಿಹೊಳಿ ಇಂದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣ ಕುರಿತು ವಿಶೇಷ ತನಿಖಾ ತಂಡ ಒಂದೆಡೆ ತನಿಖೆ ಆರಂಭಿಸಿರುವಂತೆಯೇ, ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.
ರಮೇಶ್ ಜಾರಕಿಹೊಳಿ ಬರೆದ ದೂರಿನ ಪ್ರತಿಯನ್ನು ಅವರ ಆಪ್ತ ಮಾಜಿ ಶಾಸಕ ನಾಗರಾಜ್ ಅವರು ಪೊಲೀಸ್ ಠಾಣೆಗೆ ತೆರಳಿ ನೀಡಿದ್ದಾರೆ.
ನಕಲಿ ಸಿಡಿ ಮೂಲಕ ತಮ್ಮ ತೇಜೋವಧೆ ಮಾಡಲಾಗಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ದೂರಿನಲ್ಲಿ ಕೋರಿದ್ದಾರೆ