ಹುಬ್ಬಳ್ಳಿ: ಬಿಜೆಪಿಗೆ ಗುಡ್ ಬೈ ಹೇಳುವ ಸುಳಿವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸುಳಿವು ನೀಡಿದ್ದಾರೆ. ಬಾನುವಾರ ಬೆಳಿಗ್ಗೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರವನ್ನು ಈವರೆಗೂ ಪ್ರನಿಧಿಸುತ್ತಿದ್ದ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿಲ್ಲ. ಇದರಿಂದ ಬೇಸತ್ತಿರುವ ಜಗದೀಶ್ ಶೆಟ್ಟರ್ ತಮಗೆ ಟಿಕೆಟ್ ನೀಡುವ ಬಗ್ಗೆ ಸ್ಪಷ್ಟನೆ ನೀಡಲು ಶನಿವಾರ ರಾತ್ರಿಯ ಗಡುವು ನೀಡಿದ್ದರು. ಅದರಂತೆ ವರಿಷ್ಠರಾದ ಧರ್ಮೇಂದ್ರ ಪ್ರಧಾನ್ ಸಹಿತ ಪ್ರಮುಖ ನಾಯಕರು ಶನಿವಾರ ರಾತ್ರಿಯೇ ಸಂಧಾನ ನಡೆಸಿದರು. ಆದರೆ ಸಂಧಾನ ಫಲಪ್ರದ ಆಗಿಲ್ಲ ಎನ್ನಲಾಗಿದೆ.
ಈ ನಾಯಕರ ಜೊತೆಗಿನ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ತಮಗೆ ಬಿಜೆಪಿ ನಾಯಕರ ನಡೆಯಿಂದ ತೀವ್ರ ಮುಜುಗರ ಉಂಟಾಗಿದೆ. ಹಾಗಾಗಿ ಬೆಂಬಲಿಗರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಭಾನುವಾರ ಬೆಳಿಗ್ಗೆಯೇ ಶಿರಸಿಗೆ ತೆರಳಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ರಾಜೀನಾಮೆ ಪತ್ರ ನೀಡುವುದಾಗಿ ಶೆಟ್ಟರ್ ತಿಳಿಸಿದರು.
Former Karnataka CM & senior @BJP4Karnataka leader @JagadishShettar announces resignation from MLA post & primary membership of party. "I will definitely contest this election," says @JagadishShettar after @JoshiPralhad @BSBommai & @dpradhanbjp met him. #KarnatakaElections2023 pic.twitter.com/sLJ617nVrJ
— Anusha Ravi Sood (@anusharavi10) April 15, 2023





















































