ಬೆಂಗಳೂರು: ಟಿಕೆಟ್ ವಿಚಾರದಿಂದಾಗಿ ನಾಯಕರು ಪಕ್ಷ ತ್ಯಜಿಸಿದರೆ ಬಿಜೆಪಿಗೆ ನಷ್ಟವಾಗದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ರಾಜೀನಾಮೆ ಕುರಿತಂತೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ನಮ್ಮ ಪಕ್ಷದ ಹಿರಿಯ ನಾಯಕರು ಜಗದೀಶ್ ಶೆಟ್ಟರ್ ಅವರ ಜತೆ ಮಾತುಕತೆ ನಡೆಸಿದ್ದರು. ಆದರೂ ಅವರು ತಪ್ಪು ನಿರ್ಧಾರ ಕೈಗೊಂಡಿದ್ದಾರೆ ಎಂದರು. ಶೆಟ್ಟರ್ ಅವರಿಗೆ ಬಿಜೆಪಿ ಪಕ್ಷವು ಎಲ್ಲ ಗೌರವ ಪಕ್ಷ ಕೊಟ್ಟಿತ್ತು. ಅವರು ನಮ್ಮಲ್ಲೇ ಉಳಿದುಕೊಳ್ಳುತ್ತಾರೆ ಅಂತ ವಿಶ್ವಾಸವಿತ್ತು. ಆದರೆ ಇದೀಗ ಅವರು ಪಕ್ಷ ಬಿಟ್ಟಿದರಿಂದ ಪಕ್ಷಕ್ಕೆ ಏನು ಹಿನ್ನಡೆ ಆಗಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿಜೆಪಿಯಲ್ಲಿ ಎಲ್ಲಾ ಸಮುದಾಯಗಳನ್ನು ಗುರುತಿಸಿ ಸಾಮಾಜಿಕ ನ್ಯಾಯದಡಿ ಸ್ಥಾನಮಾನ, ಟಿಕೆಟ್ ಕೊಡಲಾಗಿದೆ ಎಂದ ಅವರು,ಲಿಂಗಾಯತರನ್ನು ಗುರುತಿಸಿ ಮುಖ್ಯಮಂತ್ರಿ ಮಾಡಿದ್ದು ನಮ್ಮ ಪಕ್ಷ ಮಾತ್ರ ಎಂದು ಹೇಳಿದರು.