‘ಬಿಗ್ ಬಾಸ್ ತಮಿಳು -7’ ರಿಯಾಲಿಟಿ ಶೋನಲ್ಲಿ ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಸ್ಪರ್ಧಿ ವಿಜೇತರಾಗಿದ್ದಾರೆ.
ಭಾನುವಾರದ ಫಿನಾಲೆಯ ವೇದಿಕೆಯಲ್ಲಿ ಕಿರುತೆರೆ ನಟಿ ಅರ್ಚನಾ ರವಿಚಂದ್ರನ್ ಅವರು ಬಿಗ್ ಬಾಸ್ ಟ್ರೋಫಿಯನ್ನು ಗೆದ್ದಿದ್ದಾರೆ. ಈ ಮೂಲಕ ಮೊದಲ ಬಾರಿ ಬಿಗ್ ಬಾಸ್ ತಮಿಳು ಕಾರ್ಯಕ್ರಮದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯೊಬ್ಬರು ಗೆದ್ದಿರುವುದು ಒಂದು ಇತಿಹಾಸ.
ವಿಜೇತೆ ಅರ್ಚನಾ ಅವರಿಗೆ 50 ಲಕ್ಷ ರೂಪಾಯಿ ನಗದು, 15 ಲಕ್ಷ ರೂ. ಮೌಲ್ಯದ ನಿವೇಶನ ಹಾಗೂ ಮಾರುತಿ ನೆಕ್ಸಾ ಗ್ರಾಂಡ್ ವಿಟಾರಾ ಕಾರನ್ನು ಬಹುಮಾನವಾಗಿ ಸಿಕ್ಕಿದೆ.
ನಟ ಕಮಲ್ ಹಾಸನ್ ನಡೆಸಿಕೊಟ್ಟಿರುವ ಈ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿ ಡ್ಯಾನ್ಸರ್ ಮಾಯಾ ಕೃಷ್ಣ ಹೊರಹೊಮ್ಮಿದ್ದಾರೆ.






































































