ಬೆಳಗಾವಿ: ಮೂರು ಮಹಾನಗರ ಪಾಲಿಕೆಗಳ ಪೈಕಿ ಕುಂದಾನಗರಿ ಬೆಳಗಾವಿಯ ಚುನಾವಣೆ ಫಲಿತಾಂಶ ಕೂಡಾ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳುವಂತಿದೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಬಿಜೆಪಿ ಮೇಲುಗೈ ಸಾಧಿಸುತ್ತಿದೆ. ಜಾರಕಿಹೊಳಿ ಬ್ರದರ್ಸ್ ವರ್ಚಸ್ಸು, ಕತ್ತಿ ಕರಾಮತ್ತು ಸಹಿತ ಬಿಜೆಪಿ ನಾಯಕರ ಪ್ರತಿಷ್ಠೆ ಹಾಗೂ ಲಕ್ಷ್ಮ ಹೆಬ್ಬಾಳ್ಕರ್ ಅವರ ಪ್ರತಿಷ್ಠೆಯ ಹೋರಾಟವೂ ಹೌದು ಹಾಗಾಗಿ ಎರಡೂ ಪಕ್ಷಗಳ ನಾಯಕರು ಶಕ್ತಿ ಮೀರಿ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಇತ್ತೀಚಿನ ವರದಿ ಪ್ರಕಾರ ಒಟ್ಟು 58 ಸ್ಥಾನಗಳ ಪೈಕಿ 36ರಲ್ಲಿ ಬಿಜೆಪಿ, 9ರಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. 2 ಸ್ಥಾನಗಳನ್ನು ಎಂಇಎಸ್ ಗೆದ್ದರೆ 11 ವಾರ್ಡ್ಗಳು ಪಕ್ಷೇತರರ ಪಾಲಾಗಿವೆ.