ಬೆಂಗಳೂರು: ಸಾರಿಗೆ ನಿಗಮಗಳ ಬಸ್ ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕಿಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿವ ಬೊಮ್ಮಾಯಿ, ಮೂರೂ ನಿಗಮಗಳ ಬಸ್’ಗಳ ಸೇವೆಯನ್ನು ಪ್ರಾರಂಭಿಸಲು ಸಾರಿಗೆ ನೌಕರಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ಬಸ್ ಗಳ ಸೇವೆ ಪ್ರಾರಂಭಿಸುವ ನೌಕರರರಿಗೆ ಸರಕಾರದಿಂದ ಸಂಪೂರ್ಣ ರಕ್ಷಣೆ ನೀಡಲಾಗುವುದು ಹಾಗೂ ಇದಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ನಾಳೆ ದಿ. 14/12/2020 ರಿಂದ #BMTC ಹಾಗೂ ಮೂರು ನಿಗಮಗಳ ಬಸ್ ಗಳ ಸೇವೆಯನ್ನು ಪ್ರಾರಂಭಿಸಲು ಸಾರಿಗೆ ನೌಕರಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ಬಸ್ ಗಳ ಸೇವೆ ಪ್ರಾರಂಭಿಸುವ ನೌಕರರರಿಗೆ ಸರಕಾರದಿಂದ ಸಂಪೂರ್ಣ ರಕ್ಷಣೆ ನೀಡಲಾಗುವುದು ಹಾಗೂ ಇದಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
— Basavaraj S Bommai (Modi Ka Parivar) (@BSBommai) December 13, 2020