ಬೆಂಗಳೂರು: ಕೊರೋನಾ ಉಲ್ಬಣ ಹಿನ್ನೆಲೆಯಲ್ಲಿ ಇಂದು ನಡೆದ ಸರ್ವ ಪಕ್ಷ ಸಭೆ ಇಡೀ ರಾಜ್ಯದ ಗಮನಸೆಳೆಯಿತು. ಪ್ರಸ್ತುತ ಸೋಂಕು ನಿಯಂತ್ರಣ ಸಂಬಂಧ ಲಾಕ್‌ಡೌನ್ ಜಾರಿಯಾಗಿತ್ತಾ ಎಂಬ ಅನುಮಾನ ಎಲ್ಲರಲ್ಲೂ ಕಾಡಿದೆ. ಈ ವಿಚಾರ ಕುರಿತಂತೆಯೇ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ.
ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಸರ್ಕಾರಕ್ಕೆ ಸಲಹೆ ನೀಡಿದೆ. ಸಭೆಯ ಬಳಿಕ ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ತಮ್ಮ ಪಕ್ಷದ ಮುಖಂಡರು ಲಾಕ್‌ಡೌನ್‌ಗೆ ಜಾರಿ ಮಾಡಬೇಡಿ, ಒಂದು ವೇಳೆ ಲಾಕ್‌ಡೌನ್ ಅನಿವಾರ್ಯ ಎಂದಾದರೆ ನಮ್ಮ ಆಕ್ಷೇಪಿಸುವುದಿಲ್ಲ ಎಂದು ಸಲಹೆ ಮಾಡಿದ್ದೇವೆ ಎಂದರು. ಒಂದು ವೇಳೆ ಲಾಕ್‌ಡೌನ್ ಜಾರಿ ಮಾಡುವುದೇ ಆದಲ್ಲಿ ಪ್ರತೀ ಕುಟುಂಬಕ್ಕೆ ತಲಾ 25 ಸಾವಿರ ರೂಪಾಯಿ ನೀಡಬೇಕೆಂದು ಆಗ್ರಹಿಸಿರುವುದಾಗಿ ಅವರು ತಿಳಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಬಾರದು. ಆ ಸಂದರ್ಭದಲ್ಲಿ ಅವರಿಗೆ ಪಡಿತರ ಅಥವಾ ಔಷಧಿ ನೀಡುವ ಬದಲು ನೇರವಾಗಿ ಹಣವನ್ನೇ ನೀಡುವಂತೆ ತಾವು ಸಲಹೆ ನೀಡಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ರಾಮಲಿಂಗಾರೆಡ್ಡಿ ವಿವರಿಸಿದರು.