ಬೆಳ್ಳಂಬೆಳಿಗ್ಗೆಯೇ ಅಪಘಾತದ ಸುದ್ದಿ ಅಪ್ಪಳಿಸಿದೆ. ತುಮಕೂರು ಸಮೀಪ ಖಾಸಗಿ ಬಸ್ ಹಾಗೂ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಸಾವನ್ಬಪ್ಪಿದ್ದಾರೆ.
ತುಮಕೂರಿನ ಹೆಗ್ಗೆರೆ ಸಮೀಪದ ಗೊಲ್ಲಹಳ್ಳಿ ಬಳಿ ತುಮಕೂರು – ಶಿವಮೊಗ್ಗ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ತುಮಕೂರಿನ ಮಾರುಕಟ್ಟೆಗೆ ಹೂ ತರುತ್ತಿದ್ದ ರೈತರು ಇದ್ದ ವಾಹನ ಮತ್ತು ಬಸ್ ಡಿಕ್ಕಿಯಾಗಿದೆ ಎನ್ನಲಾಗಿದೆ. ನಸುಕಿನ ಜಾವ 5.30ರ ಸುಮಾರಿಗೆ ನಡೆದ ಅಪಘಾತ ಸಂಭವಿಸಿದ್ದು, ಬಸ್ ಚಾಲಕ ಸೇರಿ ಬಸ್ಸಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ತುಮಕೂರು ಸ್ಥಳಕ್ಕೆ ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಭೇಟಿ ನೀಡಿ ಪರಿಶೀಲಿಸಿದರು.
ಅಪಘಾತದ ರಭಸಕ್ಕೆ ಮೃತದೇಹಗಳು ಎರಡು ವಾಹನಗಳ ನಡುವೆ ಅಪ್ಪಚ್ಚಿ ಹೋಗಿತ್ತು. ಈ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.