ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಗ್ಯಾರಂಟಿ ಯೋಜನೆ ಜಾರಿಯಾಗಿ ಒಂದು ವರ್ಷವಾಗಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಸರ್ಕಾರದ ಯಶೋಗಾಥೆಗೆ ಸಾಕ್ಷಿಯಾಗಿದೆ. ಇದರ ಜೊತೆಯಲ್ಲೇ ಕೆಎಸ್ಸಾರ್ಟಿಸಿ ಸಹಿತ ಸಾರಿಗೆ ನಿಗಮಗಳು ಹೊಸ ಸಾಧನೆಯ ಪರ್ವಕ್ಕೆ ಸಾಕ್ಷಿಯಾಗುತ್ತಿದ್ದು, ಆರ್ಥಿಕ ಸಬಲತೆ, ಯಾಂತ್ರಿಕ ಕ್ಷಮತೆ, ನೇಮಕಾತಿ ಮೂಲಕ ನೌಕರ ಸೈನ್ಯದ ಬಲವರ್ಧನೆ ಮೂಲಕ ಕರ್ನಾಟಕ ಇಡೀ ದೇಶದ ಗಮನಸೆಳೆದಿದೆ.
ಯೋಜನೆ ಜಾರಿಯಾದಾಗಿನಿಂದ ಉಚಿತ ಪ್ರಯಾಣ ಮೂಲಕ 249 ಕೋಟಿ ಮಹಿಳೆಯರು ರಾಜ್ಯ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಪ್ರಯಾಣಿಸಿದ್ದು, 6051 ಕೋಟಿ ಉಚಿತ ಟಿಕೆಟ್ ಮೌಲ್ಯವಾಗಿದೆ. ಈ ಸಂಗತಿಯನ್ನೊಳಗೊಂಡ ಸಾರಿಗೆ ಇಲಾಖೆಯ ವರ್ಷದ ಸಾಧನೆಯ ಕೈಪಿಡಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅನಾವರಣಗೊಳಿಸಿ ಗಮನಸೆಳೆದಿದ್ದಾರೆ.
ಈ ಸಂದರ್ಭದಲ್ಲಿ ಯೋಜನೆ ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡ ರಾಮಲಿಂಗ ರೆಡ್ಡಿ, ಸಾರಿಗೆ ಸಚಿವನಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ, ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕು ಸಾರಿಗೆ ನಿಗಮಗಳಲ್ಲಿ ಹತ್ತಾರು ಕಾರ್ಮಿಕ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು. ಅದರಲ್ಲೂ ಶಕ್ತಿ ಗ್ಯಾರೆಂಟಿ ಯೋಜನೆಯು ಮಹಿಳಾ ಸಬಲೀಕರಣವಡೆ ಹೆಜ್ಜೆ ಇಟ್ಟಿದ್ದು, ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಾರಿಗೆ ಸಂಸ್ಥೆಯ ಸಮಸ್ತ ಕಾರ್ಮಿಕರು ಹಾಗೂ ಅಧಿಕಾರಿಗಳ ಕಾರ್ಯದಕ್ಷತೆ, ಪರಿಶ್ರಮ ವರ್ಣಿಸಲು ಪದಗಳೇ ಇಲ್ಲ ಎಂದರು.
ಶಕ್ತಿ ಯೋಜನೆ ಆರಂಭವಾದಾಗ ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ಇದೀಗ ಇದು ಇಡೀ ದೇಶವೇ ಈ ಯೋಜನೆಯನ್ನು ಕುತೂಹಲದಿಂದ ನೋಡುತ್ತಿದೆ ಎಂದ ಸಚಿವರು, ಕಳೆದ 5 ವರ್ಷದ ಅವಧಿಯಲ್ಲಿ ಅಂದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿ ಹೊರತುಪಡಿಸಿ ಇತರ ನಿಗಮಗಳಿಗೆ ಯಾವುದೇ ಬಸ್ ಸೇರ್ಪಡೆಯಾಗಿರಲಿಲ್ಲ. 13988 ಹುದ್ದೆಗಳು ಖಾಲಿಯಿದ್ದರೂ ನೇಮಕಾತಿಯಾಗಿರಲಿಲ್ಲ. ನಿಗಮಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದವು. ಇದೀಗ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬುವ ಪ್ರಾಮಾಣಿಕ ಕಾರ್ಯವನ್ನು ಮಾಡಿದ್ದೇನೆಂಬ ತೃಪ್ತಿ ಇದೆ ಎಂದವರು ಹೇಳಿದರು.
ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ವರ್ಷದ ಸಾಧನೆಯ ಹೈಲೈಟ್ಸ್ ಹೀಗಿದೆ: