ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಸರಣಿ ಅವಘಡಗಳು ಸಂಭವಿಸುತ್ತಲಿವೆ. ಉಳ್ಳಾಲ ಬಳಿ ಬುಧವಾರ ಮನೆ ಕುಸಿದು ನಾಲ್ವರು ಮೃತಪಟ್ಟ ಬೆನ್ನಲ್ಲೇ ಮಂಗಳೂರಿನ ಪಾಂಡೇಶ್ವರ ರೊಸಾರಿಯೋ ಚರ್ಚ್ ಸಮೀಪ ತುಂಡಾಗಿ ಬಿದ್ದವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಬಲಿಯಾಗಿದ್ದಾರೆ.
ಮುಂಜಾನೆ ಆಟೋ ಚಾಲಕ ಆಟೋ ಸ್ವಚ್ಚ ಗೊಳಿಸುವ ವೇಳೆ ತುಂಡಾಗಿ ಬಿದ್ದಿದ್ದ ಬೀದಿ ದೀಪದ ತಂತಿ ಸ್ಪರ್ಶಿಸಿ ಪ್ರಜ್ಞೆ ತಪ್ಪಿ ಬಿದ್ದರು. ಆತನ ರಕ್ಷಣೆಗೆ ಧಾವಿಸಿದ ಮತ್ತೊಬ್ಬ ವ್ಯಕ್ತಿಯೂ ವಿದ್ಯುತ್ ಅಘಾತಕ್ಕೆ ಒಳಗಾದರೆನ್ನಲಾಗಿದೆ. ಮೃತರನ್ನು ರಾಜು ಮತ್ತು ದೇವರಾಜು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.






































































