ದಕ್ಷಿಣ ಆಫ್ರಿಕಾ: ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ದುರಂತ ಸಂಭವಿಸಿ 90ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾದ ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿಯಲ್ಲಿ ಈ ದುರಂತ ಸಂಭವಿಸಿದ್ದು ನತದೃಷ್ಟ ದೋಣಿಯಲ್ಲಿ 130 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೀನುಗಾರಿಕಾ ದೋಣಿ ಇದಾಗಿದ್ದು ಮೊಜಾಂಬಿಕ್ ದ್ವೀಪದಿಂದ ನಂಪುಲಾ ದ್ವೀಪಕ್ಕೆ ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಏಕಾಏಕಿ ಮುಳುಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಕಾರಣ ದೋಣಿ ದುರಂತಕ್ಕೀಡಾಗಿದೆ ಎನ್ನಲಾಗಿದೆ.
#Mozambique Shipwreck makes about 100 victims in #quissanga on the island of Mozambique in the #Nampula province. There is information that shows that they fled from Quissanga (Ilha Moçambique-Nampula), because of the outbreak of #cholera that devastated that region! very sad. pic.twitter.com/dzC4WgLiK9
— José A. M. (@Muianga) April 7, 2024