ಬೆಳಗಾವಿ: ವರದಕ್ಷಿಣೆ ವಿಚಾರವೊಂದು ಮಾಡುವೆ ಮುರಿದು ಬೀಳಲು ಕಾರಣವಾಗಿದ್ದಷ್ಟೇ ಅಲ್ಲ ವರ ಜೈಲು ಸೇರಲೂ ಕಾರಣಾವಾದ ಸನ್ನಿವೇಶ ಖಾನಾಪುರದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಖಾನಾಪುರದದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಸಮಾರಂಭ ಆಯೋಜನೆಯಾಗಿತ್ತು. ಸಿದ್ಧತೆ ಸಡಗರದಿಂದಲೇ ಸಾಗಿತ್ತಾದರೂ ನಿಶ್ಚಿತಾರ್ಥ ಸಂದರ್ಭದಲ್ಲಿ ನಡೆದಿತ್ತೆನ್ನಲಾದ 50 ಗ್ರಾಂ ಬಂಗಾರ, ಒಂದು ಲಕ್ಷ ವರೋಪಚಾರ ನೀಡುವ ಮಾತುಕತೆ ಈಡೇರಿಲ್ಲ ಎಂಬ ವಿವಾದ ಮುಹೂರ್ತ ಸಂದರ್ಭದಲ್ಲಿ ಪ್ರತಿಧ್ವನಿಸಿತು.
ವರನ ಕಡೆಯವರ ಬೇಡಿಕೆಯನ್ನು ಮದುವೆಯ ಸಂದರ್ಭದಲ್ಲಿ ವಧುವಿನ ಕುಟುಂಬದವರು ನಿರಾಕರಿಸಿದ ಹಿನ್ನೆಲೆಯಲ್ಲಿ ವಿವಾಹವೇ ಮುರಿದುಬಿತ್ತೆನ್ನಲಾಗಿದೆ. ಇದರಿಂದ ನೊಂದ ವಧುವಿನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವರ ಸಚಿನ್ ಪಾಟೀಲ್ ಎಂಬಾತನನ್ನು ಬಂಧಿಸಿದ್ದಾರೆ.






















































