ಉಡುಪಿ: ಕರಾವಳಿ ಮಲೆನಾಡಿನಲ್ಲಿ ಮುಂಗಾರು ಬಿರುಸುಗೊಂಡಿದ್ದು, ಮಳೆ ಅವಾಂತರದಿಂದಾಗಿ ಭಾರೀ ಸಾವು-ನೋವುಗಳು ಸಂಭವಿಸುತ್ತಿವೆ. ಇದೇ ವೇಳೆ, ಉಡುಪಿ ಜಿಲ್ಲೆಯ ಜಲಪಾತ ಬಳಿ ರೀಲ್ಸ್ ಮಾಡಲು ಮುಂದಾದ ಯುವಕನೊಬ್ಬ ಸ್ನೇಹಿತರ ಕಣ್ಣೆದುರೇ ಪ್ರವಾಹದಲ್ಲಿ ಕೊಚ್ಚಿಹೋದ ಘಟನೆ ನಡೆಸಿದೆ.
ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕನೊಬ್ಬ ಕಾಲುಜಾರಿ ನೀರಿಗೆ ಬಿದ್ದಿದ್ದಿ, ಕೊಲ್ಲೂರು ಸಮೀಪದ ಅರಶಿಣ ಗುಂಡಿ ಜಲಪಾತದಲ್ಲಿ ಸಂಭವಿಸಿದ ಈ ದುರ್ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನೀರುಪಾಲಾದ ಯುವಕನನ್ನು ಭದ್ರಾವತಿ ಮೂಲದ ಶರತ್ ಕುಮಾರ್ (23 ವರ್ಷ) ಎಂದು ಗುರುತಿಸಲಾಗಿದೆ.
ಭಾನುವಾರ ಸ್ನೇಹಿತರೊಂದಿಗೆ ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಸ್ನೇಹಿತರು, ಅರಿಶಿಣ ಗುಂಡಿ ಜಲಪಾತವನ್ನು ವೀಕ್ಷಿಸಲು ತೆರಳಿದ್ದರು. ಜಲಪಾತ ಬಳಿ ಬಂಡೆಕಲ್ಲಿನಲ್ಲಿ ನಿಂತು ಫೋಟೋಶೂಟ್ ಮಾಡುತ್ತಿದ್ದ ಸಂದರ್ಭದಲ್ಲಿ ಶರತ್ ಕುಮಾರ್ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾನೆ.
ಶಿವಮೊಗ್ಗ ಜಿಲ್ಲೆಯ 23 ವರ್ಷದ ಶರತ್ ಕುಮಾರ್ ಜಲಪಾತ ವೀಕ್ಷಣೆಗೆ ತೆರಳಿದ ಕಾಲು ಜಾರಿ ನೀರುಪಾಲು😥
ಹೀಗೆ ಜಲಪಾತದ ಹತ್ರ ಸ್ಟೈಲ್ ಆಗಿ ನಿಂತ್ಕೊಂಡು ರೀಲ್ಸ್ ಶೋಕಿ ಮಾಡೋಕೆ ಹೋದ್ರೆ ಇನ್ನೇನ್ ಆಗುತ್ತೆ..?!🤦🏻♂️#KarnatakaNewspic.twitter.com/WcMu1IHIVn
— Akshay Akki (Modi Ji's Family) (@FollowAkshay1) July 24, 2023

























































