ಉಡುಪಿ : ಶೇಖರ ಗಾಣಿಗ ಅವರು ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿರುವ ಇವರು ಬೈಂದೂರು ತಾಲೂಕಿನ ಕಿಸ್ಮತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದ ಶಿಕ್ಷಕರಾಗಿದ್ದರು. ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ಸಮಾಜಕ್ಕೆ ವಿದ್ಯಾರ್ಥಿಗಳಿಗೆ ಹೆಮ್ಮೆ ತಂದಿರುವ ಇವರನ್ನು ಕುಂದಾಪುರ ತಾಲೂಕು ಗಾಣಿಗ ಸಂಘ, ಬೈಂದೂರು ತಗ್ಗರ್ಸೆ ಗಾಣಿಗ ಸೇವಾ ಸಂಘ, ಬೈಂದೂರು ವಲಯ ಸ್ವಾಭಿಮಾನಿ ಗಾಣಿಗ ಯುವ ಸಂಘಟನೆ, ಶ್ರೀ ವ್ಯಾಸರಾಜ ಸೇವಾ ಟ್ರಸ್ಟ್ ಪ್ರಮುಖರು ಹಾಗೂ ಊರಿನ ಸಮಸ್ತ ನಾಗರೀಕರು ಹಿತೈಷಿಗಳು ಅಭಿನಂದನೆ ಸಲ್ಲಿದ್ದಾರೆ. ಇವರಿಂದ ಇನ್ನೂ ಹೆಚ್ಚಿನ ಸಾಧನೆ ಮುಂದಿನ ದಿನಗಳಲ್ಲಿ ಆಗಲಿ ಎಂದು ಹಾರೈಸಿದ್ದಾರೆ.