ಬೆಂಗಳೂರು: ಒಂದಿಲ್ಲೊಂದು ಅವಾಂತರಕ್ಕೆ ಸಾಕ್ಷಿಯಾಗುತ್ತಿರುವ ಮಂಗಳಮುಖಿಯರ ಗುಂಪೊಂದು ದಿವಂಗತ ಹಾಸ್ಯನಟ ಬುಲೆಟ್ ಪ್ರಕಾಶ್ ಮಗನ ಮೇಲೆ ದಾಳಿ ಮಾಡಿದೆ. ಈ ಕುರಿತ ಪ್ರಕರಣವೊಂದು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಾಸ್ಯ ನಟ ದಿ. ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ದಾಳಿ ನಡೆದಿದೆ. ಹೆಬ್ಬಾಳ ಬಳಿ ಮಂಗಳವಾರ ರಾತ್ರಿ ಮಂಗಳಮುಖಿಯರ ಗುಂಪು ರಂಪಾಟ ಪ್ರದರ್ಶಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಜಿಮ್ ಮುಗಿಸಿ ವಾಪಸಾಗುತ್ತಿದ್ದ ವೇಳೆ, ರಕ್ಷಕ್ ಅವರ ಬ್ಯಾಗನ್ನು ಮಂಗಳಮುಖಿಯರ ಗುಂಪು ಎಳೆದಿದೆ. ಆಗ ರಕ್ಷಕ್ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದಾರೆ. ಈ ಅವಾಂತರದಿಂದ ಬೆಚ್ಚಿದ ರಕ್ಷಕ್ ಬೈಕ್ ಬಿಟ್ಟು ಓಡಿಹೋಗಿ ಪೊಲೀಸರ ರಕ್ಷಣೆ ಪಡೆದಿದ್ದಾರೆ. ಪೊಲೀಸರ ಸಹಾಯ ಮೂಲಕ ಅವರು ಬೈಕ್ ಪಡೆದಿದ್ದಾರೆ ಎನ್ನಲಾಗಿದೆ.
👉 ಇದನ್ನೂ ಓದಿ.. WhatsApp ಬಳಕೆದಾರರಿಗೆ ಶಾಕಿಂಗ್ ನ್ಯೂಸ್.. ನವೆಂಬರ್ 1ರಿಂದ ಬಂದ್
ಹೆಬ್ಬಾಳ ಪ್ಲೈ ಓವರ್ ಬಳಿ ಘಟನೆ ನಡೆದಿದ್ದು ರಕ್ಷಕ್ ಅವರ ಕಾಲಿಗೆ ಗಾಯಗಳಾಗಿವೆ. ಬೈಕ್ ಕೂಡಾ ಹಾನಿಗೊಳಗಾಗಿದೆ ಎಂದು ರಕ್ಷಕ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.