ಉಡುಪಿ : ರಿಪೇನ್ಸ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್, ಎಸ್.ಡಿ.ಪಿ ರೂರಲ್ ಅಭಿವೃದ್ಧಿ ಸಂಸ್ಥೆ ಸೊಸೈಟಿ, ನಗರ ಪೋಲಿಸ್ ಠಾಣಾಧಿಕಾರಿಗಳ ಕಚೇರಿ ಬ್ರಹ್ಮವಾರ ಇವರ ಆಶ್ರಯದಲ್ಲಿ “ಪ್ಲ್ಯಾಂಟ್ ಪೋರ್ ದಿ ನೇಶನ್” (ಸ್ಯಾಂಡಲ್ ವುಡ್ ಪ್ಲ್ಯಾಂಟೇಶನ್) ವಿನೂತನ ಕಾರ್ಯಕ್ರಮ ಗಮನಸೆಳೆಯಿತು. ಬ್ರಹ್ಮಾವರ ಪೊಲೀಸ್ ಸ್ಟೇಶನ್ ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಿತು.
ಉಡುಪಿ ಜಿಲ್ಲಾ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಬ್ರಹ್ಮಾವರ ಪೊಲೀಸ್ ಸ್ಟೇಶನ್ ಉಪ ನಿರೀಕ್ಷಕ ಗುರುನಾಥ್ ಬಿ ಹಾದಿಮನಿ ಇಬ್ಬರು ರಕ್ತ ಚಂದನ ಗಿಡಗಳನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು.