ಸೌದಿಯಲ್ಲಿ ಮಾಡದ ತಪ್ಪಿಗೆ ಬಂಧಿಯಾಗಿದ್ದ ತುಳುನಾಡಿನ ಹರೀಶ್ ಬಂಗೇರ ಇದೀಗ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ನೆರವಿನಿಂದಾಗಿ ಜೈಲುವಾಸದಿಂದ ಮುಕ್ತಿ ಹೊಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯ ಮೂಲಕ ಸೌದಿ ದೊರೆ ಮತ್ತು ಧರ್ಮದ ಬಗ್ಗೆ ಅವಹೇಳನ ಪ್ರಕರಣವನ್ನು ಹರೀಶ್ ಬಂಗೇರ ಎದುರಿಸುತ್ತಿದ್ದಾರೆ.
2019 ರಲ್ಲಿ ಸೌದಿ ದೊರೆ ಮತ್ತು ಧರ್ಮ ಅವಹೇಳನ ಪ್ರಕರಣ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿತ್ತು.
ನಕಲಿ ಖಾತೆ ಫೇಸ್ ಬುಕ್ ಖಾತೆಯ ಕುರಿತು ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಉಡುಪಿ ಪೊಲೀಸರು ಅಬ್ದುಲ್ ಹುಯೇಸ್ ಮತ್ತು ತುವೇಸ್ ನನ್ನು ಬಂಧಿಸಿದ್ದರು.
ಬಂಧಿತ ಸಹೋದರರು ಹರೀಶ್ ಬಂಗೇರ ಅವರ ಹೆಸರಿನ ನಕಲಿ ಖಾತೆಯ ಮೂಲಕ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ್ದರೆನ್ಬಲಾಗಿದೆ. ಆದರೆ ಈ ಆರೋಪವು ನಿರಪಾರಾದಿಯಾಗಿದ್ದ ಹರೀಶ್ ಬಂಗೇರ ಮೇಲೆ ಬಂದಿತ್ತು. ಸೌದಿಯಲ್ಲಿದ್ದ ಹರೀಶ್ ಬಂಗೇರ ಈ ಕೃತ್ಯ ಮಾಡಿದ್ದಾರೆ ಎಂದು ಸೌದಿ ಪೊಲೀಸರು ಅವರನ್ನು ಬಂಧಿಸಿ ಜೈಲಿನಲ್ಲಿರಿತ್ತು.
ಈ ನಡುವೆ, ಹರೀಶ್ ಬಂಗೇರ ಅವರು ನಿರಪರಾಧಿ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಸೌದಿ ಸರ್ಕಾರದ ಗಮನಸೆಳೆದಿದ್ದಾರೆ. ಶೋಭಾ ಕರಂದ್ಲಾಜೆ ಅವರ ಮಧ್ಯಸ್ಥಿಕೆ ನಂತರ, ಈ ಪ್ರಕಾರಣದಲ್ಲಿ ಹರೀಶ್ ಬಂಗೇರ ಅವರು ಕಾನೂನು ಸುಳಿಯಿಂದ ಪಾರಾಗಿದ್ದಾರೆ.
ಸದ್ಯ ಹರೀಶ್ ತಾಯ್ನಾಡಿಗೆ ಮರಳಲು ಸಿದ್ಧತೆ ನಡೆಸಿದ್ದು, ಆಗಸ್ಟ್ 18ಕ್ಕೆ ಊರಿಗೆ ಬರಲಿದ್ದಾರೆ. ಆಗಸ್ಟ್ 17 ರಂದು ಸೌದಿ ದಮಾಮ್ ಏರ್ ಪೋರ್ಟ್ ನಿಂದ ದೋಹಾ ಮೂಲಕ 18ರಂದು ಬೆಂಗಳೂರು ಬರಲಿದ್ದಾರೆ. ಈ ಕುರಿತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರ ಕಚೇರಿ ಮೂಲಗಳು ತಿಳಿಸಿವೆ.