ದೆಹಲಿ: ವಾಟ್ಸಪ್, ಫೇಸ್‌ಬುಕ್ ಸಂವಹನ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಇಂದು ನಿನ್ಬೆಯದಲ್ಲ. ಆದರೆ ಇದೀಗ ಸುರಕ್ಷಾ ನಿಯಮಗಳು ವಿಭಿನ್ನ ಮಾದರಿಯಲ್ಲಿದ್ದು, ಈ ನಡುವೆ ವಾಟ್ಸಪ್, ಫೇಸ್‌ಬುಕ್ ಸಂಸ್ಥೆಯ ನಿಯಮಾವಳಿಗಳ ಬಗ್ಗೆಯೂ ಚರ್ಚೆ ಸಾಗಿದೆ.
ಈ ಮಧ್ಯೆ, ಸಮಾಜಿಕ ಜಾಲತಾಣಗಳಲ್ಲಿನ ಸಂವಹನ ಕ್ರಿಯೆಗಳನ್ನು ಅಂದರೆ ವಾಟ್ಸಪ್, ಫೇಸ್‌ಬುಕ್ ಕರೆ, ಸಂದೇಶಗಳನ್ನು ಕೇಂದ್ರ ಸರ್ಕಾರ ನಿಯಂತ್ರಿಸಲಿದೆ ಎಂಬ ಸಂದೇಶಗಳು ಹರಿದಾಡುತ್ತಿವೆ.
ಈ ಬಗ್ಗೆ ಕೇಂದ್ರ ಪ್ರಸಾರ ಮತ್ತು ಮಾಹಿತಿ ಪ್ರಸಾರ ಸಚಿವಾಲಯದ ಮಾಧ್ಯಮ ಮಾಹಿತಿ ಬ್ಯೂರೋ (PIB) ಸ್ಪಷ್ಟನೆಯನ್ನು ನೀಡಿದೆ. ಸರ್ಕಾರ ಆ ರೀತಿಯ ಯಾವುದೇ ನಿಯಂತ್ರಣ ಕ್ರಮ ಅನುಸರಿಸುತ್ತಿಲ್ಲ ಎಂದು ಪಿಐಬಿ ಫಾಸ್ಟ್ ಚೆಕ್ ಮಾಹಿತಿ ಹಂಚಿಕೊಂಡಿದೆ.
Do not fall for such #Whatsapp messages being circulated.
No such thing is being done by the Government.
However, everyone is advised to not share any false news/misinformation concerning #CoronavirusInIndia
For authentic information follow @MoHFW_INDIA and @pib_India pic.twitter.com/XBErXb1CSP
— PIB Fact Check (@PIBFactCheck) March 24, 2020