ಬರೋಬ್ಬರಿ 10 ಮಂದಿ ಶಿಕ್ಷಕರನ್ನು ಬಲಿತೆಗೆದುಕೊಂಡ ಕೋವಿಡ್.. ಈ ಪೈಕಿ ಏಳು ಮಂದಿ ಮಹಿಳೆಯರು
ಗದಗ್: ಶಿಕ್ಷಕರ ಸರಣಿ ಸಾವು ಶಿಕ್ಷಣ ಕ್ಷೇತ್ರವನ್ನು ತಲ್ಲಣಗೊಳಿಸಿದೆ. ಈ ವರೆಗಿನ ಸಾವಿನ ಸರಣಿಯನ್ನು ಗಮನಿಸಿದರೆ ನಾವೆಷ್ಟು ಸೇಫ್ ಎಂಬ ಪ್ರಶ್ನೆ ಶಿಕ್ಷಕ ಸಮುದಾಯದಲ್ಲಿ ಸಹಜವೆನಿಸಿದೆ.
ಗದಗ ಜಿಲ್ಲೆಯಲ್ಲಿ ಕೊರೊನಾಗೆ ಈವರೆಗೂ 10 ಜನ ಶಿಕ್ಷಕರು ಬಲಿಯಾಗಿದ್ದಾರೆ. ಕಳೆದ ವರ್ಷದ ಒಂದನೇ ಅಲೆಗೆ ನಾಲ್ವರು ಶಿಕ್ಷಕರು ಸಾವನ್ನಪ್ಪಿದರೆ, ಈ ವರ್ಷದ ಎರಡನೇ ಅಲೆಗೆ 06 ಜನ ಶಿಕ್ಷಕರ ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
7 ಮಂದಿ ಸರಕಾರಿ ಶಿಕ್ಷಕರು ಸಾವನ್ನಪ್ಪಿದ್ರೆ ಉಳಿದವರು ಅನುದಾನ ರಹಿತ ಹಾಗೂ ಶಾಲಾ ಶಿಕ್ಷಕರು. ಸಾವನ್ನಪ್ಪಿದವರಲ್ಲಿ ಮಹಿಳಾ ಶಿಕ್ಷಕರೇ ಹೆಚ್ಚು. ಈ ಸಾವಿನ ಸರಣಿಯಿಂದಾಗಿ ಗ್ರಾಮೀಣ ಪ್ರದೇಶದ ಶಿಕ್ಷಕರಲ್ಲಿ ಆತಂಕ ಮನೆ ಮಾಡಿದೆ.