ಮೊನ್ನೆ ಮೊನ್ನೆವರೆಗೂ ದ್ರಾವಿಡರ ನೆಲದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ.. ಇದೀಗ ಕೊರೋನಾ ಸೈನಿಕನಾಗಿ ಸೋಂಕಿತರತ್ತ ಸವಾರಿ..
‘ಚಿಕ್ಕಮಗಳೂರು: ಕಿಲ್ಲರ್ ಕೊರೋನಾ ಮನುಕುಲಕ್ಕೆ ಸವಾಲಾಗಿದ್ದು ಜವರಾಯನಂತೆ ಎದುರಾಗಿರುವ ಕೋವಿಡ್ ವಿರುದ್ದ ಇಡಿ ಜಗತ್ತೇ ಹೋರಾಡುತ್ತಿದೆ. ಇತ್ತ ಕರುನಾಡು ಕೂಡಾ ವೈರಾಣು ಹಾವಳಿಯಿಂದ ತತ್ತರಿಸಿವೆ. ಕರಾವಳಿ, ಮಲೆನಾಡು ಜಿಲ್ಲೆಗಳು ಕೂಡಾ ಕೊರೋನಾ ಕಂಪನಕ್ಕೆ ಸಾಕ್ಷಿಯಾಗುತ್ತಿದೆ.
ಈ ನಡುವೆ, ಮಾಜಿ ಸಚಿವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ನಡೆ ಎಲ್ಲರ ಗಮನಸೆಳೆದಿದೆ. ಮೊನ್ನೆ ಮೊನ್ನೆವರೆಗೂ ದ್ರಾವಿಡರ ನೆಲದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಪಕ್ಷದ ಕುದುರೆಗಳ ಗೆಲುವಿಗಾಗಿ ಕಸರತ್ತಿನಲ್ಲಿದ್ದ ಸಿ.ಟಿ.ರವಿ, ಮತದಾನ ಮುಗಿಯುತ್ತಿದ್ದಂತೆಯೇ ಕೊರೋನಾ ವಾರಿಯರ್ಸ್ ಆಗಿಬಿಟ್ಟಿದ್ದಾರೆ. ಕೋವಿಡ್ ಸೋಂಕಿತರ ಸಮಸ್ಯೆಗಳೇ ಸಮಾಜಕ್ಕೀಗ ಮೂಲ ಸವಾಲು ಎಂದುಕೊಂಡ ಅವರು ತಾವು ಪಿಪಿ ಕಿಟ್ ಧರಿಸಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ಅನೇಕರು ಅನೇಕ ರೀತಿಯ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಈ ಸಂಗತಿಗಳನ್ನು ಜಿಲ್ಲಾಡಳಿತಗಳ ಗಮನಕ್ಕೆ ತಂದು ರೋಗಿಗಳಿಗೆ ನೆರವಾಗಿದ್ದಾರೆ.
ಕೋವಿಡ್ ಹಿನ್ಬೆಲೆಯಲ್ಲಿ ಕೆಲವು ದಿನಗಳಿಂದ ರಾಜಕೀಯ ಚಟುವಟಿಕೆಗಳಿಗೆ ಆದ್ಯತೆ ನೀಡದೆ, ಮಲೆನಾಡಿನ ಕೊರೋನಾ ರೋಗಿಗಳ ಆರೈಕೆ ವಿಚಾರದಲ್ಲಿ ರವಿ ಕಾರ್ಯನಿರತರಾಗಿದ್ದಾರೆ. ಆಶಾ ಕಾರ್ಯಕರ್ತೆಯರ ರೀತಿ ಯುವಜನರನ್ನು ಭೇಟಿಮಾಡಿ ಲಸಿಕೆ ಪಡೆಯುವಂತೆ ಮನವೊಲಿಸುತ್ತಿರುವ ಇವರು, ಸೋಂಕಿತರೆಂದು ಕಂಡುಬಂದವರಿಗೆ ಚಿಕಿತ್ಸೆಗಾಗಿ ಮಾರ್ಗದರ್ಶನ ಮಾಡುವ ಕೆಲಸದಲ್ಲೂ ತೊಡಗಿದ್ದಾರೆ. ಆಸ್ಪತ್ರೆಗಳಿಗೆ ಆಗಾಗ್ಗೆ ಭೇಟಿ ನೀಡಿ ಧೈರ್ಯ ತುಂಬುವ ಕೆಲಸಕ್ಕೂ ಆದ್ಯತೆ.
ಈ ನಡುವೆ, ಗುರುವಾರ ಅವರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕೋವಿಡ್19 ಸೋಂಕಿತರ ಶುಶ್ರೂಷೆ ನಡೆಯುತ್ತಿರುವ ಕೋವಿಡ್ ಸೆಂಟರ್‌ಗೆ ಭೇಟಿ ನೀಡಿ ಸೋಂಕಿತರ ಕುಟುಂಬಿಕರನ್ನು ಮಾತನಾಡಿಸಿದರು. ಜನರಿಗಿದ್ದ ಚಿಕ್ಕಪುಟ್ಟ ತೊಂದರೆಗಳನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಮಾಜಿ ಸಚಿವ ಸಿ.ಟಿ.ರವಿ, ನೋವಿನಲ್ಲಿರುವಾಗ ಸಾಂತ್ವನದ ಮಾತುಗಳೂ ಸಂಜೀವಿನಿಯಾಗುತ್ತದೆ ಎಂದರು. ಇದೇ ಮಾಹಿತಿಯನ್ನು ಅವರು ಟ್ವೀಟ್ ಮಾಡಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ನೋವಿನಲ್ಲಿರುವಾಗ ಸಾಂತ್ವಾನದ ಮಾತುಗಳೂ ಸಂಜೀವಿನಿಯಾಗುತ್ತದೆ. ಇಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕೋವಿಡ್19 ಸೋಂಕಿತರ ಶುಶ್ರೂಷೆ ನಡೆಯುತ್ತಿರುವ ಕೋವಿಡ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಕುಟುಂಬಿಕರನ್ನು ಮಾತನಾಡಿಸಿದೆ. ಅವರಿಗಿದ್ದ ಚಿಕ್ಕಪುಟ ತೊಂದರೆಗಳನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.#COVID19pic.twitter.com/7I2f70sJBX
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) May 6, 2021
ಜನರ ಸಮಸ್ಯೆಗಳನ್ನು ಸಮೀಕ್ಷೆ ರೀತಿಯಲ್ಲಿ ಕಳೆಹಾಕಿ ಅವರು ಸರ್ಕಾರಕ್ಜೆ ಸಲ್ಲಿಸುತ್ತಿದ್ದು, ಸಿಎಂ ಕೂಡಾ ಇವರ ಶಿಫಾರಸುಗಳಿಗರ ಸಕಾರಾತ್ಮಕವಾಗಿ ಸ್ಪಂಧಿಸುತ್ತಿದ್ದಾರಂತೆ.