ಚಾಮರಾಜನಗರ: ಕೆಲದಿನಗಳ ಹಿಂದಷ್ಟೇ ಅಕ್ಸಿಜನ್ ಕೊರತೆ ಹಾಗೂ ಇನ್ನಿತರ ಕಾರಣಗಳಿಂದಾಗಿ 24 ರೋಗಿಗಳು ಸಾವನ್ನಪ್ಪಿದ್ದಾರೆನನ್ನಲಾದ ಚಾಮರಾಜನರ ಮತ್ತೊಂದು ಆಘಾತಕಾರಿ ಸುದ್ದಿಯಿಂದಾಗಿ ಬೆಚ್ಚಿಬಿದ್ದಿದೆ. ಕೆಲದಿನಗಳ ಹಿಂದೆ ಸಾವಿನ ದುರಂತಕ್ಕೆ ಸಾಕ್ಷಿಯಾದ ಅದೇ ಆಸ್ಪತ್ರೆಯಲ್ಲಿ ಗುರುವಾರ ಮತ್ತೆ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆಂಬ ಮಾಹಿತಿ ಹರಿದಾಡಿದೆ.
ಕೆಲದಿನಗಳ ಹಿಂದೆ ನಡೆದ ಘಟನೆ ಕುರಿತು ಹಿರಿಯ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ನೇತೃತ್ವದಲ್ಲಿ ತನಿಖೆ ಆರಂಭವಾಗಿರುವಾಗಲೇ ಮತ್ತೆ ಸಾವಿನ ಸರಣಿ ಮುಂದುವರಿದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.